×
Ad

ವಾನಿಯ ವೈಭವೀಕರಣ: ಪಾಕ್‌ಗೆ ಭಾರತದ ತರಾಟೆ

Update: 2017-07-09 21:41 IST

ಹೊಸದಿಲ್ಲಿ,ಜು.9: ಹಿಜ್ಬುಲ್ ಉಗ್ರ ಬುರ್ಹಾನ್ ವಾನಿಯನ್ನು ವೈಭವೀಕರಿಸಿದ್ದಕ್ಕಾಗಿ ರವಿವಾರ ಪಾಕಿಸ್ತಾನವನ್ನು ತರಾಟೆಗೆತ್ತಿಕೊಂಡ ಭಾರತವು, ಭಯೋತ್ಪಾದನೆಗೆ ಆ ರಾಷ್ಟ್ರದ ಬೆಂಬಲ ಮತ್ತು ಪ್ರಾಯೋಜಕತ್ವವನ್ನು ಪ್ರತಿಯೊಬ್ಬರೂ ಖಂಡಿಸಬೇಕಾಗಿದೆ ಎಂದು ಹೇಳಿದೆ.

 ಮೊದಲು ಪಾಕಿಸ್ತಾನದ ವಿದೇಶಾಂಗ ಇಲಾಖೆಯು ನಿಷೇಧಿತ ಲಷ್ಕರ್-ಎ-ತೈಬಾದ ಹೇಳಿಕೆಯನ್ನು ಓದಿತ್ತು. ಈಗ ಪಾಕಿಸ್ತಾನದ ಸೇನಾ ಮುಖ್ಯಸ್ಥರು ವಾನಿಯನ್ನು ವೈಭವೀಕರಿಸುತ್ತಿದ್ದಾರೆ. ಪಾಕಿಸ್ತಾನವು ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವುದನ್ನು ಮತ್ತು ಪ್ರಾಯೋಜಿಸುತ್ತಿರುವುದನ್ನು ಪ್ರತಿಯೊಬ್ಬರೂ ಖಂಡಿಸಬೇಕಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಗೋಪಾಲ ಬಾಗ್ಲೆ ಅವರು ಕಟುವಾದ ಶಬ್ದಗಳಲ್ಲಿ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News