ಮ.ಪ್ರದೇಶ: ಸಾಲದ ಬಾಧೆಯಿಂದ ಇನ್ನೋರ್ವ ರೈತನ ಆತ್ಮಹತ್ಯೆ
Update: 2017-07-09 21:47 IST
ಸಾಗರ್(ಮ.ಪ್ರ),ಜು.9: 48ರ ಹರೆಯದ ರೈತನೋರ್ವ ಸಾಗರ್-ದಾಮ್ಹ ನಡುವೆ ಚಲಿಸುತ್ತಿದ್ದ ರೈಲಿನೆದುರು ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಲಿಸಿದ್ದಾರೆ.
ಮೃತ ತೇಜರಾಮ ಕುರ್ಮಿ ಕಳೆದೆರಡು ವರ್ಷಗಳಿಂದ ಮೂರು ಲಕ್ಷ ರೂ.ಗಳ ಸಾಲದ ಸುಳಿಯಲ್ಲಿ ಸಿಲುಕಿದ್ದ. ಆರು ಎಕರೆ ಭೂಮಿಯಲ್ಲಿ ಬಿತ್ತಿದ್ದ ಸೋಯಾಬೀನ್ ಬೆಳೆ ವಿಫಲಗೊಂಡ ಬಳಿಕ ಆತನ ಆರ್ಥಿಕ ಸ್ಥಿತಿ ತೀರ ಹದಗೆಟ್ಟಿತ್ತು.
ಕುರ್ಮಿ ಶನಿವಾರ ಸಂಜೆ ಮಗ ಅವಧಿಗೆ ಕರೆ ಮಾಡಿ ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದ. ರವಿವಾರ ಬೆಳಿಗ್ಗೆ ನಿಹೋರಾ ಸೇತುವೆಯ ಬಳಿ ಆತನ ಛಿದ್ರವಿಚ್ಛಿದ್ರ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದರು.
ಕಳೆದ ತಿಂಗಳಿನಿಂದ ರಾಜ್ಯದಲ್ಲಿ ಸಾಲದ ಬಾಧೆಯಿಂದಾಗಿ 60 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಕೆ.ಕೆ.ಮಿಶ್ರಾ ಹೇಳಿದ್ದಾರೆ.