ಗೋವಾ ರಾಜ್ಯಸಭಾ ಚುನಾವಣೆ : ರಾಜ್ಯ ಬಿಜೆಪಿ,ಕಾಂಗ್ರೆಸ್ ಅಧ್ಯಕ್ಷರಿಂದ ನಾಮಪತ್ರಗಳ ಸಲ್ಲಿಕೆ
Update: 2017-07-11 17:35 IST
ಪಣಜಿ,ಜು.11: ರಾಜ್ಯದಿಂದ ಏಕೈಕ ರಾಜ್ಯಸಭಾ ಸ್ಥಾನಕ್ಕಾಗಿ ಜು.21ರಂದು ನಡೆಯಲಿರುವ ಚುನಾವಣೆಗಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ವಿನಯ್ ತೆಂಡುಲ್ಕರ್ ಮತ್ತು ಹಾಲಿ ಸಂಸದ ಹಾಗೂ ಜಿಪಿಸಿಸಿ ಮುಖ್ಯಸ್ಥ ಶಾಂತಾರಾಮ ನಾಯ್ಕ ಅವರು ಮಂಗಳವಾರ ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು. ನಾಮಪತ್ರಗಳ ಸಲ್ಲಿಕೆಗೆ ಮಂಗಳವಾರ ಕೊನೆಯ ದಿನವಾಗಿದ್ದು, ಉಭಯ ನಾಯಕರು ರಾಜ್ಯ ವಿಧಾನಸಭಾ ಕಾರ್ಯದರ್ಶಿ ಎನ್.ಬಿ.ಸುಭೇದಾರ್ ಅವರಿಗೆ ನಾಮಪತ್ರಗಳನ್ನು ಸಲ್ಲಿಸಿದರು.
ಉಭಯ ನಾಯಕರೂ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯು ಪ್ರಾದೇಶಿಕ ಪಕ್ಷಗಳ ಬೆಂಬಲದೊಂದಿಗೆ ರಾಜ್ಯದಲ್ಲಿ ಅಧಿಕಾರದಲ್ಲಿ ರುವುದರಿಂದ ತೆಂಡುಲ್ಕರ್ ಬುಟ್ಟಿಯಲ್ಲಿ ಹೆಚ್ಚಿನ ಮತಗಳಿವೆ. ಸಮ್ಮಿಶ್ರ ಸರಕಾರದ ಪಾಲುದಾರರಾದ ಜಿಎಫ್‌ಪಿ,ಎಂಜಿಪಿ ಮತ್ತು ಪಕ್ಷೇತರರ ಬೆಂಬಲವನ್ನು ತೆಂಡುಲ್ಕರ್ ಹೊಂದಿದ್ದಾರೆ.