ಬ್ರಿಟನ್: ಜನಾಂಗೀಯ ನಿಂದಕ ಭಾಷೆ ಬಳಸಿದ ಸಂಸದೆ ಅಮಾನತು
Update: 2017-07-11 21:07 IST
ಲಂಡನ್, ಜು. 11: ಜನಾಂಗೀಯ ನಿಂದಕ ಭಾಷೆಯನ್ನು ಬಳಸಿದ ತನ್ನ ಕನ್ಸರ್ವೇಟಿವ್ ಪಕ್ಷದ ಸಂಸದೆಯೊಬ್ಬರನ್ನು ಬ್ರಿಟನ್ ಪ್ರಧಾನಿ ತೆರೇಸಾ ಮೇ ಅಮಾನತುಗೊಳಿಸಿದ್ದಾರೆ.
ಹಣಕಾಸು ಸೇವೆಗಳ ಕ್ಷೇತ್ರದ ಮೇಲೆ ಬ್ರೆಕ್ಸಿಟ್ ಯಾವ ಪರಿಣಾಮವನ್ನು ಬೀರಬಹುದು ಎಂಬ ಕುರಿತ ವಿಚಾರಸಂಕಿರಣವೊಂದರಲ್ಲಿ, ಐರೋಪ್ಯ ಒಕ್ಕೂಟದಿಂದ ಹೊರಬರಬೇಕೆಂಬ ಅಭಿಯಾನದ ನೇತೃತ್ವ ವಹಿಸಿದ್ದ ಆ್ಯನ್ ಮೇರೀ ಮೊರಿಸ್ ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದಾರೆ ಎನ್ನಲಾಗಿದೆ.
ಕರಿಯರು ಅಥವಾ ಕಂದು ಬಣ್ಣದವರನ್ನು ಕೀಳಾಗಿ ವರ್ಣಿಸುವ ‘ನಿಗರ್’ ಎಂಬ ಪದವನ್ನು ಈ ಸಂದರ್ಭದಲ್ಲಿ ಬಳಸಿದ್ದರು. ಬಳಿಕ ಅದಕ್ಕೆ ಕ್ಷಮೆಯನ್ನೂ ಕೋರಿದ್ದರು.