ಭಾರತ-ಚೀನಾ ಬಿಕ್ಕಟ್ಟು: ಪ್ರತಿಕ್ರಿಯಿಸಲು ಅಮೆರಿಕ ನಕಾರ
Update: 2017-07-11 21:16 IST
ವಾಶಿಂಗ್ಟನ್, ಜು. 11: ಸಿಕ್ಕಿಂ ಗಡಿಯಲ್ಲಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ಹೇಳಿಕೆ ನೀಡಲು ಅಮೆರಿಕ ನಿರಾಕರಿಸಿದೆ.
‘‘ಭಾರತ ಮತ್ತು ಚೀನಾ ಗಡಿಯಲ್ಲಿ ಉಂಟಾಗಿರುವ ಸಂಘರ್ಷದ ಕುರಿತ ವರದಿಗಳನ್ನು ನಾವು ನೋಡಿದ್ದೇವೆ. ಹೆಚ್ಚಿನ ಮಾಹಿತಿಗಾಗಿ ನೀವು ಭಾರತ ಮತ್ತು ಚೀನಾ ಸರಕಾರಗಳನ್ನು ಸಂಪರ್ಕಿಸಬಹುದು’’ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರರೋರ್ವರು ಹೇಳಿದರು.
ಭಾರತ, ಚೀನಾ ಮತ್ತು ಭೂತಾನ್ ದೇಶಗಳ ಗಡಿಗಳು ಸಂಧಿಸುವ ದೋಕ್ಲಮ್ ಪ್ರದೇಶದಲ್ಲಿ ಚೀನಾ ಸೇನೆ ನಿರ್ಮಿಸುತ್ತಿದ್ದ ರಸ್ತೆಯನ್ನು ಭಾರತ ನಿಲ್ಲಿಸಿದ ಬಳಿಕ ಅಲ್ಲಿ ಬಿಕ್ಕಟ್ಟು ತಲೆದೋರಿದೆ.