×
Ad

ರಮಝಾನ್ ಉಪವಾಸವೆಂದರೆ 'ಸಾಂಕ್ರಾಮಿಕ ರೋಗ' !: ಗುಜರಾತ್ ಪಠ್ಯ ಪುಸ್ತಕದಲ್ಲಿ ಮತ್ತೊಂದು ಅವಾಂತರ

Update: 2017-07-11 22:45 IST

ಅಹ್ಮದಾಬಾದ್, ಜು. 11: ಗುಜರಾತ್ ರಾಜ್ಯ ಶಾಲೆ ಪಠ್ಯಪುಸ್ತಕ ಮಂಡಳಿಯ 4ನೇ ತರಗತಿ ಹಿಂದಿ ಪಠ್ಯ ಪುಸ್ತಕದಲ್ಲಿ ಪವಿತ್ರ ರಮಝಾನ್ ತಿಂಗಳಲ್ಲಿ ನಡೆಸುವ ಉಪವಾಸವನ್ನು ವ್ಯಾಖ್ಯಾನಿಸುವ ಉರ್ದು ಪದ ರೋಝಾಕ್ಕೆ ಬೇಧಿಗೆ ಕಾರಣವಾಗುವ ಸಾಂಕ್ರಾಮಿಕ ರೋಗ ಎಂದು ಹೇಳಲಾಗಿದೆ.

 ಖ್ಯಾತ ಲೇಖಕ ಪ್ರೇಮ್‌ಚಂದ್ ಅವರ ಕಥೆ ಈದ್ಗಾವನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸಲಾಗಿದ್ದು, ಪಠ್ಯದ ಅಂತ್ಯದಲ್ಲಿರುವ ಶಬ್ದಾರ್ಥ ಕೋಶದಲ್ಲಿ ಹಲವು ಗಂಭೀರ ತಪ್ಪುಗಳು ಕಂಡುಬಂದಿವೆ. ಇಲ್ಲಿ ರೋಝಾ ಪದಕ್ಕೆ ಬೇಧಿಗೆ ಕಾರಣವಾಗುವ ಸಾಂಕ್ರಾಮಿಕ ರೋಗ ಎಂಬ ಅರ್ಥ ನೀಡಲಾಗಿದೆ.

  ಬಗ್ಗೆ ಶಿಕ್ಷಣ ಹಕ್ಕು ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಪದಗಳು ಒಂದು ವರ್ಗದ ಜನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ. ಆದುದರಿಂದ ಪಠ್ಯ ಪುಸ್ತಕವನ್ನು ಹಿಂದಕ್ಕೆ ತೆಗೆಯಬೇಕು ಎಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ಪುಸ್ತಕ ಮಂಡಳಿಯ ಅಧ್ಯಕ್ಷ ನಿತೀನ್ ಪೆಟ್ಹಾನಿ, ಹೈಜಾ ಪದದ ಬದಲು ರೋಜಾ ಪದ ಮುದ್ರಣವಾಗಿದೆ. ಪದಗಳು ಪರಸ್ಪರ ಅದಲುಬದಲಾಗಿ ಮುದ್ರಿತವಾಗಿದೆ ಎಂದು ಹೇಳಿದ್ದಾರೆ.

2015ರಲ್ಲಿ ಈ ಪಠ್ಯ ಪುಸ್ತಕವನ್ನು ಪರಿಚಯಿಸಲಾಗಿದೆ. ಈ ಪಠ್ಯ ಪುಸ್ತಕದಲ್ಲಿ ಯಾವುದೇ ತಪ್ಪು ಇರಲಿಲ್ಲ. ಆದರೆ 2007ರ ಆವೃತ್ತಿಯಲ್ಲಿ ಮುದ್ರಣ ದೋಷ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.

ಮುಖ್ಯವಾಗಿ ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡುವ ದುರುದ್ದೇಶದಿಂದಲೇ ಈ ತಪ್ಪು ಮಾಡಲಾಗಿದೆ ಎಂಬುದು ನನ್ನ ಭಾವನೆ. ಈ ಹಿಂದೆ ನಾವು ಜೀಸಸ್ ಬಗ್ಗೆ ಅವಮಾನಕರ ಪದ ಬಳಸಿದ ಬಗ್ಗೆ ಮಂಡಳಿಯ ಗಮನಕ್ಕೆ ತಂದಿದ್ದೆವು ಎಂದು ಹೋರಾಟಗಾರ್ತಿ ಮುಜಾಹಿದ್ ನಫೀಸಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News