×
Ad

ಖಾಸಗಿ ವಿಮಾನ ಪತನ: ಭಾರತ ಮೂಲದ ವೈದ್ಯ ದಂಪತಿ ಸಾವು

Update: 2017-07-12 20:50 IST

ಹ್ಯೂಸ್ಟನ್ (ಅಮೆರಿಕ), ಜು. 12: ಅಮೆರಿಕದ ಓಹಿಯೊ ರಾಜ್ಯದಲ್ಲಿ ಖಾಸಗಿ ವಿಮಾನವೊಂದು ಪತನಗೊಂಡು ಅದರಲ್ಲಿ ಪ್ರಯಾಣಿಸುತ್ತಿದ್ದ ಭಾರತೀಯ ಅಮೆರಿಕನ್ ವೈದ್ಯ ದಂಪತಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.

ಇಂಡಿಯಾನ ರಾಜ್ಯದ ಲೋಗನ್‌ಸ್ಪೋರ್ಟ್ ನಿವಾಸಿಗಳಾದ 63 ವರ್ಷದ ಉಮಾಮಹೇಶ್ವರ ಕಲಪಟಪು ಮತ್ತು ಅವರ ಪತ್ನಿ 61 ವರ್ಷದ ಸೀತಾ-ಗೀತಾ ಕಲಪಟಪು ಪ್ರಯಾಣಿಸುತ್ತಿದ್ದ ಖಾಸಗಿ ವಿಮಾನ ಜುಲೈ 8ರಂದು ಓಹಿಯೊ ರಾಜ್ಯದ ಬೆವರ್ಲಿಯ ನಿರ್ಜನ ಪ್ರದೇಶದಲ್ಲಿ ಪತನಗೊಂಡಿತ್ತು.

ಕಲಪಟಪು ದಂಪತಿ ಮಾನಸಿಕ ತಜ್ಞರಾಗಿದ್ದರು. ಅವರು ರಾಜ್ ಕ್ಲಿನಿಕ್ ನಡೆಸುತ್ತಿದ್ದು ಅದರ ಶಾಖೆಗಳು ಲೋಗನ್‌ಸ್ಪೋರ್ಟ್, ಇಂಡಿಯಾನಪೊಲಿಸ್, ಫೋರ್ಟ್ ವೇನ್, ಲಫಯೆಟ್ ಮತ್ತು ಕೊಮೊಮೊಗಳಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News