ಕಮಲ್ ಹಾಸನ್ ಬಂಧನಕ್ಕೆ ಪಟ್ಟುಹಿಡಿದ ಸಂಘಪರಿವಾರ: ಕಾರಣವೇನು ಗೊತ್ತೇ?
ಚೆನ್ನೈ, ಜು.12: ರಿಯಾಲಿಟಿ ಶೋ “ಬಿಗ್ ಬಾಸ್ ” ತಮಿಳುನಾಡಿನ ಜನರ ಭಾವನೆಗಳಿಗೆ ಘಾಸಿ ಮಾಡಿದೆ ಎಂದು ಆರೋಪಿಸಿರುವ ಸಂಘಪರಿವಾರ ಖ್ಯಾತ ನಟ, ನಿರ್ದೇಶಕ ಕಮಲ್ ಹಾಸನ್ ರನ್ನು ಬಂಧಿಸಬೇಕು ಎಂದು ಒತ್ತಾಯಿಸಿದೆ. ಇಷ್ಟೇ ಅಲ್ಲದೆ ಬಿಗ್ ಬಾಸ್ ರಿಯಾಲಿಟಿ ಶೋವನ್ನು ನಿಷೇಧಿಸಬೇಕು ಎಂದು ಪಟ್ಟುಹಿಡಿದಿದೆ.
ಈ ರಿಯಾಲಿಟಿ ಶೋನಲ್ಲಿ ಭಾಗವಹಿಸಿರುವ ಸ್ಪರ್ಧಿಗಳನ್ನೂ ಸಹ ಬಂಧಿಸಬೇಕು ಎಂದು ಸಂಘಪರಿವಾರ ಹೇಳಿದ್ದು, ಸ್ಪರ್ಧಿಗಳು ಅಶ್ಲೀಲವಾಗಿ ಮಾತನಾಡುತ್ತಾರೆ ಹಾಗೂ 75 ಶೇ.ದಷ್ಟು ನಗ್ನರಾಗಿರುತ್ತಾರೆ. ತಮಿಳು ಸಂಸ್ಕೃತಿಯನ್ನು ಘಾಸಿಗೊಳಿಸಿದ್ದರಿಂದ ಅವರನ್ನು ಬಂಧಿಸಬೇಕು ಹಾಗೂ ಕಾರ್ಯಕ್ರಮವನ್ನು ನಿಷೇಧಿಸಬೇಕು” ಎಂದಿದೆ.
ಇಷ್ಟೇ ಅಲ್ಲದೆ ಕಾರ್ಯಕ್ರಮವು ದ್ರಾವಿಡ ಹಾಗೂ ಎಡಪಂಥೀಯ ಸಿದ್ಧಾಂತಗಳನ್ನು ಪ್ರೋತ್ಸಾಹಿಸುತ್ತಿದೆ. ಜಲ್ಲಿಕಟ್ಟು ಪ್ರತಿಭಟನೆಯ ಸಂದರ್ಭ ಬಿಜೆಪಿ ವಿರುದ್ಧ ಘೋಷಣೆ ಕೂಗಿದ್ದಕ್ಕಾಗಿ ಜೂಲಿಯಾನರನ್ನು ಸ್ಪರ್ಧಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಹಿಂದೂ ಮಕ್ಕಳ್ ಕಚ್ಚಿಯ ಅರ್ಜುನ್ ಸಂಪತ್ ಹೇಳಿದ್ದಾರೆ.