×
Ad

ನೋಟು ಅಪಮೌಲ್ಯೀಕರಣ: ಜಮೆಯಾದ ನೋಟು ಲೆಕ್ಕ ಹಾಕುತ್ತಿದ್ದೇವೆ; ಆರ್‌ಬಿಐ ಗವರ್ನರ್

Update: 2017-07-12 23:34 IST

ಹೊಸದಿಲ್ಲಿ, ಜು. 12: ನೋಟು ಅಪಮೌಲ್ಯೀಕರಣದ ಬಳಿಕ ಜಮೆ ಮಾಡಲಾದ ರದ್ದಿ ನೋಟುಗಳನ್ನು ಇನ್ನೂ ಲೆಕ್ಕ ಹಾಕಕುತ್ತಿದ್ದೇವೆ ಎಂದು ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಬುಧವಾರ ಸಂಸದೀಯ ಸಮಿತಿಗೆ ತಿಳಿಸಿದ್ದಾರೆ.

ಹಣಕಾಸಿನ ಕುರಿತು ಸಂಸತ್ತಿನ ಸ್ಥಾಯಿ ಸಮಿತಿ ಸಭೆಯಲ್ಲಿ ಸದಸ್ಯರೊಬ್ಬರು ಡಿಸೆಂಬರ್ 30ರ ವರೆಗೆ ವಿನಿಮಯ ಮಾಡಿಕೊಳ್ಳಲಾದ 1000 ಹಾಗೂ 500ರ ನೋಟಗಳ ವೌಲ್ಯದ ವಿವರವನ್ನು ಕೇಳಿದಾಗ ಪಟೇಲ್ ಈ ಮಾಹಿತಿ ನೀಡಿದರು.

ಕಳೆದ ವರ್ಷ ನವೆಂಬರ್‌ನಲ್ಲಿ ನೋಟು ಅಪವೌಲ್ಯೀಕರಣ ಮಾಡಿದ ಸಂದರ್ಭ ದೇಶದಲ್ಲಿ 17.7 ಲಕ್ಷ ಕೋ. ರೂ. ಚಲಾವಣೆಯಲ್ಲಿ ಇತ್ತು. ಈಗ 15.4 ಲಕ್ಷ ಕೋಟಿ ರೂಪಾಯಿ ಚಲಾವಣೆಯಲ್ಲಿ ಇದೆ ಎಂದು ಅವರು ಹೇಳಿದರು.

 ಜನವರಿ 18ರಂದು ನೋಟು ಅಪವೌಲ್ಯೀಕರಣದ ನಿರ್ಧಾರದ ಬಗ್ಗೆ ಹಣಕಾಸಿನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ವೀರಪ್ಪ ಮೊಲಿ ಆರ್‌ಬಿಐ ಗವರ್ನರ್‌ರನ್ನು ಪ್ರಶ್ನಿಸಿದರು. ಮೊಲಿ ಅವರ ಈ ಪ್ರಶ್ನೆ ಹಾಗೂ ಇತರ ಪ್ರಶ್ನೆಗಳಿಗೆ ಗವರ್ನರ್ ಉತ್ತರ ನೀಡದ ನುಣುಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News