ಅಮರನಾಥ ಯಾತ್ರಿಕರ ಹತ್ಯೆಗೆ ಅಮೆರಿಕ ಖಂಡನೆ

Update: 2017-07-13 13:20 GMT

ವಾಶಿಂಗ್ಟನ್, ಜು. 13: ಅಮರನಾಥ ಯಾತ್ರಿಕರ ಮೇಲೆ ಸೋಮವಾರ ನಡೆದ ಭಯೋತ್ಪಾದಕ ದಾಳಿಯನ್ನು ಅಮೆರಿಕ ಖಂಡಿಸಿದೆ ಹಾಗೂ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತದೊಂದಿಗೆ ಜೊತೆಯಾಗಿ ಕೆಲಸ ಮಾಡುವುದನ್ನು ಮುಂದುವರಿಸುವುದಾಗಿ ಹೇಳಿದೆ.

‘‘ಧಾರ್ಮಿಕ ಸ್ವಾತಂತ್ರದ ಮೇಲಿನ ದಾಳಿಯು ಅತ್ಯಂತ ಮೂಲಭೂತ ಹಕ್ಕಾಗಿರುವ ಸ್ವಾತಂತ್ರದ ಮೇಲಿನ ದಾಳಿಯಾಗಿದೆ’’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಬುಧವಾರ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಅಮರನಾಥ ಯಾತ್ರಿಕರ ಮೇಲೆ ನಡೆದ ದಾಳಿಯಲ್ಲಿ ಏಳು ಯಾತ್ರಿಕರು ಮೃತಪಟ್ಟಿದ್ದಾರೆ ಹಾಗೂ 19 ಮಂದಿ ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News