×
Ad

ಪ್ರಧಾನಿ ಮೋದಿಯನ್ನು ಮತ್ತೊಬ್ಬ “ಗಾಂಧಿ” ಎಂದ ಕೇಂದ್ರ ಸಚಿವ ಮಹೇಶ್ ಶರ್ಮಾ

Update: 2017-07-13 19:23 IST

ಹೊಸದಿಲ್ಲಿ, ಜು,13: ಅನೇಕ ಪೀಳಿಗೆಗಳಿಗೆ ಸ್ಫೂರ್ತಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮತ್ತೋರ್ವ ಗಾಂಧಿ ಎಂದು ಕೇಂದ್ರ ಸಚಿವ ಮಹೇಶ್ ಶರ್ಮಾ ಹೇಳಿದ್ದಾರೆ.

ಮಹಾತ್ಮಾ ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹದ ಕುರಿತ ಪುಸ್ತಕವೊಂದರ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ರೂಪದಲ್ಲಿ ಮತ್ತೋರ್ವ ಗಾಂಧೀಜಿಯವರನ್ನು ಪಡೆದ ನಾವು ಅದೃಷ್ಟವಂತರು” ಎಂದವರು ಹೇಳಿದರು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿಯವರ ಕೊಡುಗೆಯ ಬಗ್ಗೆ ಮಾತನಾಡಿದ ಅವರು. ಉಪ್ಪಿನ ಸತ್ಯಾಗ್ರಹವು ಒಂದು ಚಿಟಿಕೆ ಉಪ್ಪಿನ ವಿಚಾರವಲ್ಲ, ಬದಲಾಗಿ, ಹಲವು ತಲೆಮಾರುಗಳಿಗೆ ಸ್ಫೂರ್ತಿಯಾಗಿದೆ ಎಂದರು.

“ಮೋದಿಯವರು ಸ್ವಾತಂತ್ರ್ಯದ ಹೊಳಪನ್ನು ದೇಶದ ಪ್ರತಿಯೊಬ್ಬ ನಾಗರಿಕನಿಗೆ ತಲುಪಿಸುವ ಭರವಸೆಯೊಂದಿಗೆ ತಮ್ಮ ಕೆಲಸವನ್ನು ಆರಂಭಿಸಿದರು. ಗಾಂಧೀಜಿಯವರ ಕನಸುಗಳನ್ನು ಸಾಕಾರಗೊಳಿಸುವುದು ಅವರ ಕನಸಾಗಿದೆ” ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News