ಕಾವ್ಯಾ ಮಾಧವನ್ ವಿಚಾರಣೆಗೆ ಒಳಪಡಿಸಲು ಕೇರಳ ಪೊಲೀಸ್ ನಿರ್ಧಾರ

Update: 2017-07-13 18:38 GMT

ಕೊಚ್ಚಿ, ಜು. 13: ನಟಿ ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ನಟ ದಿಲೀಪ್‌ರ ಪತ್ನಿ ಕಾವ್ಯಾ ಮಾಧವನ್‌ನನ್ನು ವಿಚಾರಣೆಗೆ ಒಳಪಡಿಸಲು ಕೇರಳ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪಲ್ಸರ್ ಸುನಿಯೊಂದಿಗೆ ಸಂಪರ್ಕ ಇರುವ ಹಿನ್ನೆಲೆಯಲ್ಲಿ ಕೆಲವು ದಿನಗಳಲ್ಲಿ ಮಲೆಯಾಳದ ಜನಪ್ರಿಯ ನಟಿ ಕಾವ್ಯಾ ಮಾಧವನ್ ಹಾಗೂ ಆಕೆಯ ತಾಯಿಯನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

 ಪಲ್ಸರ್ ಸುನಿ ಅಪಹರಣ ಹಾಗೂ ಕಿರುಕುಳದ ಘಟನೆ ನಂತರ ಕಾವ್ಯಾಮಾಧವನ್ ಅವರಿಗೆ ಸೇರಿದ ಅಂಗಡಿ ಲಕ್ಷಕ್ಕೆ ಪ್ರವೇಶಿಸುತ್ತಿರುವ ಸಿಸಿಟಿವಿ ದೃಶ್ಯಾವಳಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಈ ಬಗ್ಗೆ ಹಾಗೂ ಫೆಬ್ರವರಿ 16ರಿಂದ 18ರ ವರೆಗೆ ಅಂಗಡಿಯ ಸಿಸಿಟಿವಿ ದೃಶ್ಯಾವಳಿಯನ್ನು ನಾಶಮಾಡಿರುವುದರ ಬಗ್ಗೆ ಕಾವ್ಯಾ ಮಾಧವನ್ ಹಾಗೂ ಅವರ ತಾಯಿಯನ್ನು ಪ್ರಶ್ನಿಸಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

 ಘಟನೆ ನಡೆದ ಬಳಿಕ ಕಾವ್ಯ ಮಾಧವನ್ ಅಂಗಡಿಯಲ್ಲಿ ಸುನಿಗೆ 2 ಲಕ್ಷ ರೂಪಾಯಿ ನೀಡಲಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಅಂಗಡಿ ಕಾವ್ಯಾ ಮಾಧವನ್ ಅವರ ತಾಯಿ ನಿರ್ವಹಿಸುತ್ತಿರುವುದರಿಂದ ಅವರನ್ನು ಕೂಡ ಪ್ರಶ್ನಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News