×
Ad

ಬರಗಾಲದಲ್ಲಿ ರೆತರ ಕೆ ಹಿಡಿದ ಟೊಮೆಟೊ ಬೆಳೆ

Update: 2017-07-13 23:56 IST

ಚಿಕ್ಕಮಗಳೂರು, ಜು.13: ಬರದಿಂದಾಗಿ ಹಲವೆಡೆ ಇಳುವರಿ ಪ್ರಮಾಣ ಕಡಿಮೆಯಾಗಿದೆ.ವೈಜ್ಞಾನಿಕ ವಿಧಾನ ಅನುಸರಿಸಿ ಬೆಳೆದಿರುವ ಕಡೆಗಳಲ್ಲಿ ಉತ್ತಮ ಫಸಲಾಗಿದೆ. ಆದರೆ ಬೆಳೆಗೆ ಉತ್ತಮ ಬೆಲೆ ಇದ್ದರೂ ಇಳುವರಿ ಇಲ್ಲ ಎಂಬಂತಾಗಿದೆ.

ಇದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಟೊಮೆಟೊ ಬೆಳೆದಿರುವ ರೈತರ ಪರಿಸ್ಥಿತಿ. ಕಳೆದ ಮೂರು ವರ್ಷಗಳಿಂದಲೂ ಬರದಿಂದ ಕಾಫಿನಾಡಿನ ರೈತರು ಬರಗಾಲಕ್ಕೆ ತತ್ತರಿಸಿ ಹೋಗಿದ್ದಾರೆ. ಬೆಳೆದ ಬೆಳೆಯೆಲ್ಲಾ ನೆಲಕಚ್ಚಿ ಕಂಗಾಲಾಗಿದ್ದರು. ಆದರೆ ಚಿಕ್ಕಮಗಳೂರು ತಾಲೂಕಿನ ರೈತರು ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿ ಟೊಮೆಟೊ ಬೆಳೆದು ಬರದಲ್ಲೂ ಬಂಪರ್ ಇಳುವರಿ ಪಡೆಯುತ್ತಿದ್ದಾರೆ.

ಕಳೆದ ಮೂರು ವರ್ಷ ಗಳಿಂದಲೂ ಬರದಿಂದ ಕಾಫಿನಾಡಿನ ರೈತರು ಬರಗಾಲಕ್ಕೆ ತತ್ತರಿಸಿ ಹೋಗಿದ್ದಾರೆ. ಬೆಳೆದ ಬೆಳೆಯೆಲ್ಲಾ ನೆಲಕಚ್ಚಿ ಕಂಗಾಲಾಗಿದ್ದರು. ಆದರೆ ಚಿಕ್ಕಮಗಳೂರು ತಾಲೂಕಿನ ರೈತರು ವೈಜ್ಞ್ಞಾನಿಕ ಕ್ರಮಗಳಲ್ಲಿ ಅಳವಡಿಸಿ ಟೊಮೆಟೊ ಬೆಳೆದು ಬರದಲ್ಲೂ ಬಂಪರ್ ಇಳುವರಿ ಪಡೆಯುತ್ತಿದ್ದಾರೆ. ಜೊತೆಗೆ ಮಾರುಕಟ್ಟೆಯಲ್ಲೂ ಪ್ರತೀ ಕೆ.ಜಿಗೆ 50 ರಿಂದ 60 ರೂ.ಗೆ ಮಾರಾಟವಾಗುತ್ತಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

 ಆದರೆ ದಿನೇ ದಿನೇ ಹೆಚ್ಚುತ್ತಿರುವ ಬೆಲೆ ಗ್ರಾಹಕರಿಗೆ ಮಾತ್ರ ಗಾಯದ ಮೇಲೆ ಬರೆ ಹಾಕಿದಂತಾಗಿದೆ. ಒಂದೆಡೆ ಭೀಕರ ಬರಗಾಲ ತಾಂಡವವಾಡುತ್ತಿದ್ದರು ಕೂಡ ಜಿಲ್ಲೆಯ ಮುಗುಳುವಳ್ಳಿ ಸುತ್ತಮುತ್ತಲಿನ ರೈತರು ವೈಜ್ಞಾನಿಕ ರೀತಿ ಅನುಸರಿಸಿ ಟೊಮೆಟೊ ಬೆಳೆಯುವುದರೊಂದಿಗೆ ಉತ್ತಮ ಇಳುವರಿಯನ್ನು ಪಡೆಯುತ್ತಿದ್ದಾರೆ. ಹನಿ ನಿರಾವರಿಯನ್ನು ಅಳವಡಿಸಿಕೊಂಡು ಇಲ್ಲಿನ ಕೆಲ ರೈತರು ಟೊಮೆಟೊ ನಾಟಿ ಮಾಡಿದ್ದು, ಈಗಾಗಲೆೀ ಲಕ್ಷಾಂತರ ರೂ. ಲಾಭ ಗಳಿಸಿದ್ದಾರೆ.

 ಜಿಲ್ಲೆಯ ಲಕ್ಯಾ, ಸಖರಾಯಪಟ್ಟಣ, ಹಿರೇಗೌಜ, ಅಂಬಳೆ, ಯು.ಬಿ. ಹಳ್ಳಿ ಮುಂತಾದ ಭಾಗಗಳಲ್ಲಿ ಹೇರಳವಾಗಿ ಟೊಮೆಟೊ ಬೆಳೆಯಲಾಗುತ್ತಿತ್ತು. ಆದರೆ ಪ್ರತೀ ವರ್ಷ ಅನುಭವಿಸುತ್ತಿದ್ದ ನಷ್ಟದಿಂದ ಬೇಸತ್ತ ರೈತರು ಈ ಬಾರಿ ಹೆಚ್ಚಿನ ವಿಸ್ತೀರ್ಣದಲ್ಲಿ ಟೊಮೆಟೊವನ್ನು ಬೆಳೆದಿಲ್ಲ. ಅಲ್ಲದೆ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಟೊಮೆಟೊ ಇಳುವರಿ ಸಹ ಬಹಳ ಕಡಿಮೆಯಾಗಿದೆ. ಟೊಮೆಟೊಗೆ ಹೆಚ್ಚಿನ ಬೆಲೆ ದೊರೆಯುತ್ತಿದ್ದರೂ ಸಹ ಇಳುವರಿ ಕಡಿಮೆಯಾಗಿ ಈ ಭಾಗದ ರೈತರು ಮತ್ತೊಮ್ಮೆ ಸಮಸ್ಯೆ ಅನುಭವಿಸುವಂತಾಗಿದೆ.

ಇನ್ನು ಕಳೆದ 3/4 ತಿಂಗಳ ಹಿಂದೆ ಪ್ರತೀ ಕೆ.ಜಿಗೆ ಹತ್ತರಿಂದ ಇಪ್ಪತ್ತು ರೂಪಾಯಿಗೆ ಮಾರಾಟವಾಗುತ್ತಿದ್ದ ಟೊಮೆಟೊ, ಇದೀಗ ದಿಢೀರನೇ ಪ್ರತೀ ಕೆ.ಜಿ 50 ರಿಂದ 60 ರೂ.ಗೆ ಮಾರಾಟವಾಗುತ್ತಿದೆ. ಪ್ರತೀ ಟೊಮೊಟೊ ಕ್ರೇಟ್‌ಗೆ 1,300 ರಿಂದ 1,400 ರೂ. ವನ್ನು ನಿಗದಿ ಮಾಡಲಾಗಿದೆ.

 ಒಂದೆಡೆ ಉತ್ತಮ ಬೆಲೆ, ಇನ್ನೊಂದೆಡೆ ಬರದ ನಡುವೆಯೂ ಲಭಿಸಿದ ಬಂಪರ್ ಇಳುವರಿ ನಮ್ಮನ್ನು ಸಂಕಷ್ಟದಿಂದ ಪಾರು ಮಾಡಿದೆ. ಬರವಿದ್ದರೂ ವೈಜ್ಞಾನಿಕವಾಗಿ ಟೊಮೆಟೊ ಬೆಳೆದು ಲಾಭಗಳಿಸಬಹುದು. ಮಾರುಕಟ್ಟೆಯಲ್ಲಿ ಟೊಮೆಟೊ ಧಾರಣೆಯನ್ನು ಕಾಯ್ದುಕೊಂಡಲ್ಲಿ ರೈತರಿಗೆ ಉತ್ತಮ ಲಾಭ ಲಭಿಸುತ್ತದೆ.
 ಕೃಪಾಕರ್, ಟೋಮೋಟ ವ್ಯಾಪಾರಿ. 

Writer - ಅಝೀಝ್ ಕಿರುಗುಂದ

contributor

Editor - ಅಝೀಝ್ ಕಿರುಗುಂದ

contributor

Similar News