ಶರತ್ ಕೊಲೆ ಪ್ರಕರಣ:10 ದಿನ ಕಳೆದರೂ ಆರೋಪಿಗಳ ಬಂಧನವಾಗಿಲ್ಲ: ವಿಹಿಂಪ ಮುಖಂಡ ಗೋಪಾಲ್

Update: 2017-07-14 08:57 GMT

ಮಂಗಳೂರು, ಜು. 14: ಶರತ್ ಕೊಲೆ ನಡೆದು 10 ದಿನ ಕಳೆದರೂ ಆರೋಪಿಗಳ ಬಂಧನವಾಗಿಲ್ಲ. ಪಿಎಫ್ ಐ ಸಂಘಟನೆ ಪ್ರಮುಖರನ್ನು ವಿಚಾರಣೆಗೆ ಒಳಪಡಿಸಿದರೆ ಆರೋಪಿಗಳು ಯಾರೆಂದು ತಿಳಿದುಬರುತ್ತದೆ. ಪೊಸರಿಗೆ ಸರ್ಕಾರದ ಬೆಂಬಲವಿಲ್ಲ, ಸಿಎಂ ಆರೋಪಿಗಳ ಪರ ನಿಂತಿದ್ದಾರೆ ಎಂದು ವಿಹಿಂಪ ಸಂಘಟನಾ ಕಾರ್ಯದರ್ಶಿ ಗೋಪಾಲ್ ಹೇಳಿದರು. 

ಅವರು ಇಂದು ಮಂಗಳೂರಿನಲ್ಲಿ ನಡೆದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಇನ್ನು ನಾವು ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ, ಎಸ್ ಡಿ ಪಿ ಐ, ಪಿ ಎಫ್ ಐ ಕಾರ್ಯಕರ್ತರನ್ನು ಸುಮ್ಮನೆ ಬಿಡಲಾಗಿದೆ ಮತ್ತು ಹಿಂದೂ ಸಂಘಟನೆಯ ಮುಖಂಡರ ಮೇಲೆ ಕೇಸ್ ಹಾಕಲಾಗಿದೆ. ಗೃಹ ಇಲಾಖೆಯ ಸಲಹೆಗಾರ ಕೆಂಪಯ್ಯರನ್ನು ವಾಪಾಸ್ ಕರೆಸಿಕೊಳ್ಳಿ, ವಿಚಾರಣೆ ನೆಪದಲ್ಲಿ ಹಿಂದೂಗಳ ಮನೆಗೆ ಪೊಲೀಸ್ ದಾಳಿ ನಡೆಸಲಾಗುತ್ತಿದೆ. ಮನೆಗಳ ಮೇಲೆ ದಾಳಿ ಮುಂದುವರಿದಲ್ಲಿ ಮುಂದೆ ಆಗುವ ಅನಾಹುತಕ್ಕೆ ಸರಕಾರವೇ ಹೊಣೆ ಎಂದು ವಿಹಿಂಪ ಸಂಘಟನಾ ಕಾರ್ಯದರ್ಶಿ ಗೋಪಾಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News