×
Ad

ಮೆಕ್ಸಿಕೊ: ಹುಟ್ಟುಹಬ್ಬದ ಮನೆಗೆ ದಾಳಿ; 11 ಸಾವು

Update: 2017-07-14 19:23 IST

ಮೆಕ್ಸಿಕೊ ಸಿಟಿ, ಜು. 14: ಮಧ್ಯ ಮೆಕ್ಸಿಕೊದಲ್ಲಿ ಹುಟ್ಟುಹಬ್ಬ ಸಂಭ್ರಮಾಚರಣೆ ನಡೆಯುತ್ತಿದ್ದ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು 11 ಮಂದಿಯನ್ನು ಚೂರಿಯಿಂದ ಇರಿದು ಕೊಂದಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದರು.

ರಾಜಧಾನಿ ಮೆಕ್ಸಿಕೊ ಸಿಟಿಯ ಉತ್ತರ ಭಾಗದಲ್ಲಿರುವ ಟಿಝಯುಕ ಸಮೀಪದ ಮನೆಯ ಮೇಲೆ ದಾಳಿ ನಡೆಯಿತು ಎಂದು ಹಿಡಾಲ್ಗೊ ರಾಜ್ಯದ ಪ್ರಾಸಿಕ್ಯೂಟರ್ ಜೇವಿಯರ್ ರಮಿರೊ ಲಾರಾ ಸಲಿನಸ್ ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದರು.

ಹಳೆಯ ದ್ವೇಷವನ್ನು ತೀರಿಸುವುದಕ್ಕಾಗಿ ಈ ದಾಳಿ ನಡೆದಿದೆ ಎನ್ನುವುದು ತನಿಖೆಯಿಂದ ಗೊತ್ತಾಗಿದೆ ಎಂದರು. ಮನೆಯಲ್ಲಿದ್ದ ನಾಲ್ವರು ಅಪ್ರಾಪ್ರ ವಯಸ್ಕರು ಬದುಕುಳಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News