×
Ad

'ಜಿನ್ನಾ ಚಿತ್ರದ ಬಸ್'ಗೆ ಬೆಂಕಿ ಹಚ್ಚಿ, ಬಸ್ ಮಾಲಕನನ್ನು ಕೊಲ್ಲಹೊರಟ ಸಂಘಪರಿವಾರದ ಮಂದಿ!

Update: 2017-07-14 20:22 IST

ಬೆಂಗಳೂರು, ಜು.14: ಮುಹಮ್ಮದ್ ಅಲಿ ಜಿನ್ನಾ ಚಿತ್ರ ಅಂಟಿಸಿರುವ ಬಸ್ಸೊಂದು ಬೆಂಗಳೂರು ನಗರದಲ್ಲಿ ಓಡಾಡುತ್ತಿದೆ ಎನ್ನುವ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ಬಗ್ಗೆ ನಮೋ ಬ್ರಿಗೇಡ್ ನ ನೀರಜ್ ಕಾಮತ್ ಎಂಬವನು ಟ್ವಿಟ್ಟರ್ ನಲ್ಲಿ ಪೋಸ್ಟೊಂದನ್ನು ಮಾಡಿದ್ದು, 1000ಕ್ಕೂ ಹೆಚ್ಚು ಶೇರ್ ಆಗಿತ್ತು. ಇಷ್ಟೇ ಅಲ್ಲದೆ ಪೋಸ್ಟ್ ಕಾರ್ಡ್ ನ್ಯೂಸ್ ನ ಅಭಿಷೇಕ್ ಸಿಂಗ್ ಎಂಬಾತ, "ಇದರ ವಿರುದ್ಧ ನಿಮ್ಮಲ್ಲಿ ಎಷ್ಟು ಮಂದಿ ಹೋರಾಟ ನಡೆಸುತ್ತೀರಿ. ಈ ಬಸ್ ಮಾಲಕನನ್ನು ಇರಿದು ಕೊಂದು ಬಸ್ಸನ್ನು ಹೊತ್ತಿಸುವ ಪ್ರತಿಜ್ಞೆಯನ್ನು ಎಷ್ಟು ಮಂದಿ ಮಾಡುತ್ತೀರಿ” ಎಂದು ಪ್ರಶ್ನಿಸಿ ಪ್ರಚೋದಿಸಿದ್ದ.

ಆದರೆ ಈ ಸುದ್ದಿಯ ಹಿಂದಿನ ಅಸಲಿಯತ್ತನ್ನು ಆಲ್ಟ್ ನ್ಯೂಸ್ (altnews.in) ಬಹಿರಂಗಪಡಿಸಿದೆ.

ಈ ಫೋಟೊ ವೈರಲ್ ಆಗುತ್ತಿದ್ದಂತೆ ಸಂಘಪರಿವಾರದ ಮಂದಿ ಈ ಸುದ್ದಿಯ ಹಿಂದಿನ ಸತ್ಯಾಸತ್ಯತೆಯನ್ನೂ ಅರಿಯುವ ಗೋಜಿಗೆ ಹೋಗದೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸತೊಡಗಿದರು. ನಂತರ ಈ ಸುದ್ದಿಯನ್ನು ಸಂಘಪರಿವಾರದ ಹಲವು ವೆಬ್ ಸೈಟ್ ಗಳು ಪ್ರಕಟಿಸಿದವು.

ವಾಸ್ತವವೇನು?:

ಬೆಂಗಳೂರಿನಲ್ಲಿ ಓಡಾಡಿದ ಈ ಬಸ್ ಮಲಯಾಳಂ ಚಲನಚಿತ್ರ “ಆಭಾಸಂ”ನ ಚಿತ್ರೀಕರಣಕ್ಕಾಗಿ ಬಳಸಲಾಗಿತ್ತು. ಈ ಚಿತ್ರದ ಚಿತ್ರೀಕರಣ ನಗರದಲ್ಲಿ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಜಿನ್ನಾ ಚಿತ್ರವಿರುವ ಬಸ್ ನಗರದ ರಸ್ತೆಗಳಲ್ಲಿ ಓಡಾಡಿತ್ತು. ಈ ಬಗ್ಗೆ ಆಲ್ಟ್ ನ್ಯೂಸ್ (altnews.in)  ಚಿತ್ರತಂಡದ ಜೊತೆ ಮಾತನಾಡಿದ್ದು, ಚಿತ್ರತಂಡ ಕೂಡ ಇದನ್ನು ಸ್ಪಷ್ಟಪಡಿಸಿದೆ.

ಆದರೆ ಒಂದು ವಿಷಯದ ಸತ್ಯಾಸತ್ಯತೆಯನ್ನೂ ಅರಿಯದ ದುಷ್ಕರ್ಮಿಗಳು ಕೊಲ್ಲುವ, ಬೆಂಕಿ ಹಚ್ಚುವ, ಪ್ರತಿಭಟಿಸುವ ಅಪಾಯಕಾರಿ ಚಟುವಟಿಕೆಗಳಿಗೆ ಅಮಾಯಕರನ್ನು ಪ್ರೇರೇಪಿಸುವುದು ವಿಪರ್ಯಾಸವೇ ಸರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News