ಜಾಗತಿಕ ತಾಪಮಾನದಿಂದ ವಿಮಾನ ಹಾರಾಟಕ್ಕೆ ಸಮಸ್ಯೆ

Update: 2017-07-14 17:30 GMT

ವಾಶಿಂಗ್ಟನ್, ಜು. 14: ಜಾಗತಿಕ ತಾಪಮಾನದಿಂದಾಗಿ ಹೆಚ್ಚುತ್ತಿರುವ ಉಷ್ಣತೆಯು ಮುಂದಿನ ದಶಕಗಳಲ್ಲಿ ವಿಮಾನಗಳ ಹಾರಾಟಕ್ಕೆ ಸಮಸ್ಯೆಯಾಗಲಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ದಿನದ ಅತ್ಯಂತ ಉಷ್ಣತೆಯ ಹೊತ್ತಿನಲ್ಲಿ, ಪೂರ್ಣ ಭರ್ತಿಯಾದ ವಿಮಾನಗಳ ಪೈಕಿ 10ರಿಂದ 30 ಶೇಕಡ ವಿಮಾನಗಳು ಸ್ವಲ್ಪ ಇಂಧನ, ಸರಕು ಅಥವಾ ಕೆಲವು ಪ್ರಯಾಣಿಕರನ್ನು ಹೊರಗಿಡಬೇಕಾಗಬಹುದು ಅಥವಾ ಹಾರಾಟ ನಡೆಸಲು ಉಷ್ಣತೆ ಕಡಿಮೆ ಆಗುವವರೆಗೆ ಕಾಯಬೇಕಾಗಬಹುದು ಎಂದು ಸಂಶೋಧಕರು ಹೇಳಿದ್ದಾರೆ.

 ‘‘ಭಾರ ನಿರ್ಬಂಧವು ವಿಮಾನಯಾನ ಕಂಪೆನಿಗಳ ಮೇಲೆ ಹೆಚ್ಚುವರಿ ವೆಚ್ಚವನ್ನು ಹೇರಬಹುದಾಗಿದೆ ಹಾಗೂ ಇದು ಜಾಗತಿಕವಾಗಿ ವಿಮಾನಯಾನ ಉದ್ಯಮದ ಮೇಲೆ ಪರಿಣಾಮಬೀರಬಹುದಾಗಿದೆ ಎನ್ನುವುದನ್ನು ನಮ್ಮ ಸಂಶೋಧನೆಗಳು ತೋರಿಸಿವೆ’’ ಎಂದು ಅಮೆರಿಕದ ಕೊಲಂಬಿಯ ವಿಶ್ವವಿದ್ಯಾನಿಲಯದ ಎತನ್ ಕಾಫೆಲ್ ಹೇಳಿದರು.

ಗಾಳಿ ಬಿಸಿಯಾದಾಗ ಅದು ಹಿಗ್ಗುತ್ತದೆ ಹಾಗೂ ಅದರ ಸಾಂದ್ರತೆ ಕಡಿಮೆಯಾಗುತ್ತದೆ. ತೆಳು ಗಾಳಿಯಲ್ಲಿ ವಿಮಾನಗಳು ರನ್‌ವೇಯಲ್ಲಿ ಓಡುವಾಗ ಅದರ ರೆಕ್ಕೆಗಳ ಭಾರ ಹೊರುವ ಸಾಮರ್ಥ್ಯ ಕಡಿಮೆಯಾಗುತ್ತದೆ ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News