ಕಲಾಯಿ: ಅಶ್ರಫ್ ಸ್ಮರಣಾರ್ಥ ಮದ್ರಸ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

Update: 2017-07-15 07:33 GMT

ಫರಂಗಿಪೇಟೆ, ಜು.15: ಇತ್ತೀಚೆಗೆ ದುಷ್ಕರ್ಮಿಗಳಿಂದ ಕೊಲೆಯಾದ ಅಶ್ರಫ್ ಕಲಾಯಿ ಸ್ಮರಣಾರ್ಥ ಅವರ ಕುಟುಂಬಸ್ಥರು ಕಲಾಯಿ ಹಿದಾಯತುಲ್ ಇಸ್ಲಾಮ್ ಮದ್ರಸದ 1ರಿಂದ 9ನೆ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ, ಕುರ್ ಆನ್ ಗಳನ್ನು ವಿತರಿಸಿದರು.

ಮದ್ರಸದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಲಾಯಿ ಮದೀನ ಜುಮಾ ಮಸ್ಜಿದ್ ಖತೀಬ್ ಅಹ್ಮದ್ ದಾರಿಮಿ, ಮಸೀದಿ ಕಮಿಟಿಯ ಅಧ್ಯಕ್ಷ ಎಂ.ಎಸ್.ಜಿ.ಎ.ಅಬ್ದುಲ್ ರಹಿಮಾನ್, ಹಿದಾಯತುಲ್ ಇಸ್ಲಾಮ್ ವೆಲ್ಫೇರ್ ಎಜುಕೇಶನ್ ಕಮಿಟಿಯ ಕಾರ್ಯದರ್ಶಿ ಎ.ಎಚ್.ಅಬ್ದುಲ್ ಸಲಾಮ್, ಸದರ್ ಉಸ್ತಾದ್ ನಝೀರ್ ದಾರಿಮಿ, ಮದ್ರಸ ಅಧ್ಯಾಪಕರಾದ ಫಾರೂಕ್ ಮುಸ್ಲಿಯಾರ್, ಶಹೀರ್ ಮುಸ್ಲಿಯಾರ್, ಶಹೀದ್ ಮುಸ್ಲಿಯಾರ್, ಅಶ್ರಫ್ ಕಲಾಯಿಯ ಸಹೋದರರಾದ ಹನೀಫ್, ಸಾದಿಕ್, ಸಿದ್ದೀಕ್,  ಮತ್ತು ಎಸ್.ಡಿ.ಪಿ.ಐ. ಗ್ರಾಮ ಸಮಿತಿ ಸದಸ್ಯರಾದ ಉಸ್ಮಾನ್ ಕಲಾಯಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News