ಪಾಕ್ ಉಗ್ರರ ದಾಳಿ: ಇಬ್ಬರು ಇರಾನ್ ಪ್ರಜೆಗಳ ಸಾವು
Update: 2017-07-16 22:29 IST
ಟೆಹರಾನ್, ಜು. 16: ಪಾಕಿಸ್ತಾನಿ ಭಯೋತ್ಪಾದಕರು ಗಡಿಯಾಚೆಯಿಂದ ನಡೆಸಿದ ದಾಳಿಯಲ್ಲಿ ಇಬ್ಬರು ಇರಾನ್ ನಾಗರಿಕರು ಮೃತಪಟ್ಟಿದ್ದಾರೆ ಎಂದು ಇರಾನ್ ಸೇನೆ ರೆವಲೂಶನರಿ ಗಾರ್ಡ್ಸ್ ಹೇಳಿದೆ.
‘‘ಶನಿವಾರ ಸಂಜೆ, ಭಯೋತ್ಪಾದಕರ ತಂಡವೊಂದು ಸಿಸ್ತಾನ್ ಬಲೂಚಿಸ್ತಾನ್ ಪ್ರಾಂತದಲ್ಲಿ ಪಾಕಿಸ್ತಾನಿ ನೆಲದಿಂದ ಇರಾನ್ ಗಡಿ ಪಟ್ಟಣ ಸರವನ್‌ನತ್ತ ಗುಂಡು ಹಾರಿಸಿದೆ’’ ಎಂದು ತನ್ನ ವೆಬ್‌ಸೈಟ್‌ನಲ್ಲಿ ಹಾಕಿದ ಹೇಳಿಕೆಯೊಂದರಲ್ಲಿ ಅದು ತಿಳಿಸಿದೆ.
‘‘ಈ ಭಯೋತ್ಪಾದಕ ದಾಳಿಯಲ್ಲಿ ಈ ಸ್ಥಳದಲ್ಲಿದ್ದ ಇಬ್ಬರು ಸ್ಥಳೀಯ ಕಾರ್ಮಿಕರು ಮೃತಪಟ್ಟಿದ್ದಾರೆ’’ ಎಂದಿದೆ.