ದೇಶದ ಹಿರಿಯ ಹುಲಿ ಸ್ವಾತಿ ಸಾವು
Update: 2017-07-16 23:11 IST
ಗುವಾಹತಿ, ಜು. 16: ದೇಶದ ಅತೀ ಹೆಚ್ಚು ವಯಸ್ಸಿನ ಹುಲಿ ಸ್ವಾತಿ ಇಂದು ಅಸ್ಸಾಂ ರಾಜ್ಯ ಮೃಗಾಲಯದಲ್ಲಿ ರವಿವಾರ ಸಾವನ್ನಪ್ಪಿದೆ.
ರವಿವಾರ ಕೊನೆ ಉಸಿರೆಳೆಯುವವರೆಗೆ ದೇಶದಲ್ಲಿ ಜೀವಿಸಿದ್ದ ಅತಿ ಹೆಚ್ಚು ವಯಸ್ಸಿನ ಹುಲಿ ಸ್ವಾತಿ ಆಗಿತ್ತು. ಕಳೆದ ಕೆಲವು ದಿನಗಳಿಂದ ಸ್ವಾತಿಗೆ ಅನಾರೋಗ್ಯ ಕಾಡುತ್ತಿತ್ತು. ಕೆಲವು ಸಮಯಗಳಿಂದ ಸ್ವಾತಿಯ ಬಗ್ಗೆ ತೀವ್ರ ಕಾಳಜಿ ವಹಿಸಲಾಗಿತ್ತು. ಸ್ವಾತಿ ದೃಷ್ಟಿ ಕಳೆದುಕೊಂಡಿತ್ತು ಹಾಗೂ ದೇಹ ತೂಕ ಕಡಿಮೆಯಾಗುತ್ತಿತ್ತು. ರವಿವಾರ 2 ಗಂಟೆಗೆ ಸ್ವಾತಿ ಮೃತಪಟ್ಟಿದೆ ಎಂದು ಅಸ್ಸಾಂ ರಾಜ್ಯ ಮೃಗಾಲಯವನ್ನು ನೋಡಿಕೊಳ್ಳುತ್ತಿರುವ ವಿಭಾಗೀಯ ಅರಣ್ಯ ಅಧಿಕಾರಿ ತೇಜಸ್ ಮರಿಸ್ವಾಮಿ ಹೇಳಿದ್ದಾರೆ.
1998ರಲ್ಲಿ ಮೈಸೂರು ಮೃಗಾಲಯದಲ್ಲಿ ಸ್ವಾತಿಯ ಜನನವಾಗಿತ್ತು. 2005ರಲ್ಲಿ ಗುವಾಹತಿಗೆ ತರಲಾಗಿತ್ತು.