ಅತಿ ಹಗುರು ಹೋವಿಟ್ಜರ್ ಗನ್ ಪೋಖ್ರಾನ್‌ನಲ್ಲಿ ಪರೀಕ್ಷಾರ್ಥ ಪ್ರಯೋಗ
ಸೆಪ್ಟಂಬರ್‌ವರೆಗೆ ಪರೀಕ್ಷಾರ್ಥ ಪ್ರಯೋಗ 30 ವರ್ಷಗಳ ಬಳಿಕ ಈ ಗನ್ ಹೊಂದಲಿದೆ ಸೇನೆ
ಹೊಸದಿಲ್ಲಿ, ಜು. 16: ಸ್ವೀಡನ್‌ನ ಬೋಫರ್ಸ್ ಕಂಪೆನಿಯಿಂದ 155 ಎಂಎಂ ಫೀಲ್ಡ್ ಹಾವಿಟ್ಜರ್ ಖರೀದಿಯ 30 ವರ್ಷದ ಬಳಿಕ ಭಾರತೀಯ ಸೇನೆ ಅಮೆರಿಕ ಸೇನೆಯಿಂದ ಖರೀದಿಸಿದ ಎರಡು ದೂರವ್ಯಾಪ್ತಿಯ ಅಲ್ಟ್ರಾಲೈಟ್ ಹೋವಿಟ್ಜರ್(ಗನ್)ಗಳನ್ನು ಪೋಖ್ರನ್‌ನಲ್ಲಿ ಸಮಗ್ರ ಕ್ಷೇತ್ರ ಪ್ರಯೋಗ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾ ಗಡಿಗುಂಟ ನಿಯೋಜಿಸಲು ಉದ್ದೇಶಿಸಲಾದ ಎಂ777 ಎ ಅಲ್ಟ್ರಾ ಹೋವಿಟ್ಜರ್‌ಗಳ ವಿವಿಧ ನಿರ್ಣಾಯಕ ಅಂಕಿ-ಅಂಶಗಳಾದ ಪಥ, ವೇಗ,ಆವರ್ತನವನ್ನು ಜೋಡಿಸುವ ಹಾಗೂ ನಿರ್ಧರಿಸುವ ಉದ್ದೇಶವನ್ನು ಈ ಗನ್‌ನ ಪರೀಕ್ಷಾರ್ಥ ಪ್ರಯೋಗ ಹೊಂದಿದೆ ಎಂದು ಅವರು ತಿಳಿಸಿದರು.
ಸಮಗ್ರ ನಿಯೋಜನೆ ಪ್ರಕ್ರಿಯೆಯಲ್ಲಿ ಪ್ರಮಖ ಅಂಶಗಳಾದ ಫೈರಿಂಗ್ ಟೇಬಲ್‌ಗಳನ್ನು ರೂಪಿಸಲು ಸೆಪ್ಟಂಬರ್ ವರಗೆ ಈ ಪ್ರಯೋಗಾರ್ಥ ಪರೀಕ್ಷೆ ನಡೆಯಲಿದೆ. ಭಾರತೀಯ ಸ್ಪೋಟಕಗಳನ್ನು ಸ್ಫೋಟಿಸುವ ಸಾಮರ್ಥ್ಯವನ್ನು 155 ಎಂಎಂ, 155 ಎಂಎಂ, 39 ಸಾಮರ್ಥ್ಯದ ಗನ್‌ಗಳು ಮಾತ್ರ ಹೊಂದಿವೆ. 2018ರ ಸೆಪ್ಟಂಬರ್ ಹೊತ್ತಿಗೆ ತರಬೇತಿಗೆ ಇನ್ನೂ ಮೂರು ಗನ್‌ಗಳನ್ನು ಸೇನೆಗೆ ಪೂರೈಕೆಯಾಗಲಿದೆ. ಅನಂತರ 2019 ಮಾರ್ಚ್‌ನಿಂದ ಈ ಗನ್‌ಗಳ ನಿಯೋಜನೆ ಆರಂಭವಾಗಲಿದೆ. 2021ರ ಮಧ್ಯಭಾಗದಲ್ಲಿ ಸರಕು ರವಾನೆ ಪೂರ್ಣವಾಗುವ ವರೆಗೆ 2009 ಮಾರ್ಚ್‌ನಿಂದ ಪ್ರತಿ ತಿಂಗಳ ಐದೈದು ಗನ್‌ಗಳನ್ನು ನಿಯೋಜಿಸಲಾಗುವುದು ಎಂದು ಅವರು ಹೇಳಿದರು.
ಪರೀಕ್ಷಾರ್ಥ ಪ್ರಯೋಗ ಸಲೀಸಾಗಿ ನಡೆಯುತ್ತಿದೆ ಹಾಗೂ ಫೈಯರಿಂಗ್ ಟೇಬಲ್ ರೂಪಿಸಿಲು ವಿವಿಧ ಅಂಕಿ-ಅಂಶಗಳನ್ನ ಸಂಗ್ರಹಿಸಲಾಗುತ್ತಿದೆ. ಈ ಗನ್‌ಗಳ ನಿಯೋಜನೆಯಲ್ಲಿ ತಡವಾಗಲಾರದು ಎಂಬ ಭರವಸೆ ನೀಡುವುದು ಇದರ ಉದ್ದೇಶ ಎಂದು ಅವರು ತಿಳಿಸಿದರು.
ಪ್ರಾದೇಶಿಕವಾಗಿ ಭದ್ರತೆ ಕೈಗೊಳ್ಳಲು ಸೇನೆಯು ಈ ಹೋವಿಟ್ಜರ್ ಗನ್‌ಗಳನ್ನು ಹೊಂದುತ್ತಿದೆ. 1980ರ ಮಧ್ಯಭಾಗದಲ್ಲಿ ಭಾರತ ಹೋವಿಟ್ಜರ್ ಗನ್‌ಗಳನ್ನು ಸ್ವೀಡನ್‌ನ ಶಸ್ತ್ರಾಸ್ತ್ರ ನಿರ್ಮಾಣ ಕಂಪೆನಿಯಿಂದ ಖರೀದಿಸಿತ್ತು. ಈ ಸಂದರ್ಭ ಲಂಚ ಪಡೆದ ಬಗ್ಗೆ ವಿವಾದ ಉಂಟಾಗಿತ್ತು. ಇದು ರಾಜಕೀಯ ಭಿನ್ನಾಭಿಪ್ರಾಯಗಳಿಗೂ ಕಾರಣವಾಗಿತ್ತು. ಇದರಿಂದ ಭಾರತೀಯ ಸೇನೆ ಈ ಗನ್‌ಗಳನ್ನು ಹೊಂದುವುದಕ್ಕೆ ತಡೆ ಉಂಟಾಗಿತ್ತು.