×
Ad

ನಟ ದಿಲೀಪ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Update: 2017-07-17 15:38 IST

ಕೊಚ್ಚಿ,ಜು. 17: ನಟ ದಿಲೀಪ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಗುರುವಾರಕ್ಕೆ ಮುಂದೂಡಿದೆ.

  ಮಧ್ಯಾಹ್ನ 1:45ಕ್ಕೆ ಹೈಕೋರ್ಟಿನಲ್ಲಿ ಜಾಮೀನು ಅರ್ಜಿಯನ್ನು ವಿಚಾರಣೆಗೆತ್ತಿಕೊಂಡಾಗ ಸರಕಾರದ ಪರವಾಗಿ ಹಾಜರಾದ ಡೈರೆಕ್ಟರ್ ಜನರಲ್ ಆಫ್ ಪ್ರಾಸಿಕ್ಯೂಶನ್ ಮಂಜೇರಿ ಶ್ರೀಧರನ್ ನಾಯರ್ ಪ್ರಕರಣದ ಅಧ್ಯಯನಕ್ಕೆ ಸಮಯಾವಕಾಶ ಅಗತ್ಯವಿದೆಯೆಂದು ಕೋರ್ಟಿಗೆ ಮನವಿ ಮಾಡಿದರು.  ಆರೋಪಿ ಪರವಾಗಿ ಹೊಸ ಅರ್ಜಿ ಸಲ್ಲಿಸಿದ್ದರಿಂದ ಅದರ ಅಧ್ಯಯನ ನಡೆಸಲು ಸಮಯಾವಕಾಶ ಬೇಕಾಗಿದೆಯೆಂದು ಅವರು ಹೇಳಿದರು

    ದಿಲೀಪ್‌ರ ಜಾಮೀನು ಅರ್ಜಿ ವಿಚಾರಣೆಯನ್ನು ಸೋಮವಾರದವರೆಗೆ ಮುಂದೂಡಬೇಕೆಂದು ಕೋರ್ಟಿಗೆ ಸರಕಾರ ಆಗ್ರಹಿಸಿದೆ.ಆದರೆ ವಾದವನ್ನು ಆಲಿಸಿದ ಕೋರ್ಟು ಗುರುವಾರಕ್ಕೆ ಮುಂದೂಡಿದೆ.

  ಆದರೆ ಇಂದೇ ಜಾಮೀನು ಅರ್ಜಿಯನ್ನು ಪರಿಗಣಿಸಬೇಕೆಂದು ಆರೋಪಿ ಪರವಕೀಲರು ಕೋರ್ಟಿಗೆ ಮನವಿ ಮಾಡಿದರೂ ಕೋರ್ಟು ಅಂಗೀಕರಿಸಲಿಲ್ಲ. ಪೊಲೀಸರು ಜಾಮೀನು ಅರ್ಜಿ ವಿರೋಧಿಸಿ ಅಫಿದಾವಿತ್ ಸಲ್ಲಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News