×
Ad

ಸಿರಿಯ ಸಂಘರ್ಷದಲ್ಲಿ 3.3 ಲಕ್ಷ ಜನರು ಬಲಿ

Update: 2017-07-17 17:57 IST

ಬೆರೂತ್, ಜು. 17: ಸಿರಿಯದಲ್ಲಿ ಆರು ವರ್ಷಗಳ ಹಿಂದೆ ಆಂತರಿಕ ಸಂಘರ್ಷ ಆರಂಭಗೊಂಡಂದಿನಿಂದ 3,30,000ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಹಾಗು ಅವರ ಪೈಕಿ ಸುಮಾರು ಮೂರನೆ ಒಂದು ಭಾಗ ನಾಗರಿಕರು ಎಂದು ಸಿರಿಯ ಮಾನವ ಹಕ್ಕುಗಳ ವೀಕ್ಷಣಾಲಯ ಹೇಳಿದೆ.

2011 ಮಾರ್ಚ್ ಮಧ್ಯ ಭಾಗದಲ್ಲಿ ಸರಕಾರಿ ವಿರೋಧಿ ಪ್ರತಿಭಟನೆಗಳ ಮೂಲಕ ಸಂಘರ್ಷ ಆರಂಭಗೊಂಡಂದಿನಿಂದ ಸಿರಿಯಾದ್ಯಂತ ಸಂಭವಿಸಿದ 3,31,765 ಸಾವುಗಳನ್ನು ತಾನು ದಾಖಲಿಸಿದ್ದೇನೆ ಎಂದು ಬ್ರಿಟನ್‌ನಿಂದ ಕಾರ್ಯಾಚರಿಸುತ್ತಿರುವ ವೀಕ್ಷಣಾಲಯ ತಿಳಿಸಿದೆ.

ಮೃತಪಟ್ಟವರ ಪೈಕಿ 99,617 ಮಂದಿ ನಾಗರಿಕರು ಎಂದು ವೀಕ್ಷಣಾಲಯದ ಮುಖ್ಯಸ್ಥ ರಮಿ ಅಬ್ದುಲ್ ರಹಮಾನ್ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.ಈ ಅಂಕಿಸಂಖ್ಯೆಗಳು 2011 ಮಾರ್ಚ್ 15 ಮತ್ತು 2017 ಜುಲೈ 15ರ ನಡುವಿನ ಅವಧಿಗೆ ಸಂಬಂಧಿಸಿವೆ ಎಂದರು. ಮೃತ ನಾಗರಿಕರ ಪೈಕಿ 18,243 ಮಕ್ಕಳು ಮತ್ತು 11,427 ಮಹಿಳೆಯರಿದ್ದಾರೆ.

ಸಂಘರ್ಷ ಆರಂಭಗೊಂಡಂದಿನಿಂದ ಸಿರಿಯದ ಸರಕಾರಿ ಸೇನೆಯ 1,16,774 ಸೈನಿಕರು ಅಥವಾ ಅದರ ಬೆಂಬಲಿಗರು ಮೃತಪಟ್ಟಿದ್ದಾರೆ ಎಂದು ವೀಕ್ಷಣಾಲಯ ತನ್ನ ಇತ್ತೀಚಿನ ವರದಿಯೊಂದರಲ್ಲಿ ತಿಳಿಸಿದೆ. ಈ ಅವಧಿಯಲ್ಲಿ 57,000 ಬಂಡುಕೋರರು ಪ್ರಾಣ ಕಳೆದುಕೊಂಡಿದ್ದಾರೆ. ಅದೂ ಅಲ್ಲದೆ, ಐಸಿಸ್, ಅಲ್-ಖಾಯಿದ ಮುಂತಾದ ಭಯೋತ್ಪಾದಕ ಗುಂಪುಗಳಿಗೆ ಸೇರಿದ 58,000 ಮಂದಿ ಸತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News