×
Ad

ಇಸ್ರೇಲ್‌ನ ಅಲ್-ಅಕ್ಸ ಮಸೀದಿಗೆ ಬೀಗ: ಸೌದಿ ಶುರಾ ಕೌನ್ಸಿಲ್ ಖಂಡನೆ

Update: 2017-07-19 19:09 IST

ರಿಯಾದ್, ಜು. 19: ಇಸ್ರೇಲ್‌ನ ಅಲ್-ಅಕ್ಸ ಮಸೀದಿಯನ್ನು ಮುಚ್ಚಿರುವುದನ್ನು ಸೌದಿ ಅರೇಬಿಯದ ಶುರಾ ಕೌನ್ಸಿಲ್ ಖಂಡಿಸಿದೆ. ಇದು ಅಪಾಯಕಾರಿ ಪೂರ್ವನಿದರ್ಶನವೊಂದನ್ನು ಹುಟ್ಟುಹಾಕಿದೆ ಹಾಗೂ ಮುಸ್ಲಿಮರ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಅದು ಹೇಳಿದೆ.

ಅಪಾಯಕಾರಿ ಮತ್ತು ಅಸಂಬದ್ಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿರುವ ಬಗ್ಗೆ ಮಂಗಳವಾರ ನಡೆದ 47ನೆ ಸಾಮಾನ್ಯ ಸಭೆಯಲ್ಲಿ ಶುರಾ ಕೌನ್ಸಿಲ್ ಗಂಭೀರ ಕಳವಳ ವ್ಯಕ್ತಪಡಿಸಿದೆ.

ಇಸ್ರೇಲ್‌ನ ಕ್ರಮವು ಈಗಾಗಲೇ ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತಿರುವ ಫೆಲೆಸ್ತೀನ್ ಜನತೆಯನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ ಹಾಗೂ ಇಸ್ರೇಲಿ ದಬ್ಬಾಳಿಕೆ ಮುಂದುವರಿದಿರುವುದನ್ನು ತೋರಿಸಿದೆ ಎಂದು ಹೇಳಿಕೆಯೊಂದರಲ್ಲಿ ಅದು ತಿಳಿಸಿದೆ.

ಕಳೆದ ಶುಕ್ರವಾರ ಫೆಲೆಸ್ತೀನೀಯರು ಮತ್ತು ಇಸ್ರೇಲಿ ಭದ್ರತಾ ಸಿಬ್ಬಂದಿ ನಡುವೆ ಮಸೀದಿಯ ಹೊರಭಾಗದಲ್ಲಿ ನಡೆದ ಘರ್ಷಣೆಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಮತ್ತು ಮೂವರು ಫೆಲೆಸ್ತೀನೀಯರು ಮೃತಪಟ್ಟಿದ್ದಾರೆ. ಆ ಬಳಿಕ ಇಸ್ರೇಲ್ ಮಸೀದಿಯನ್ನು ಮುಚ್ಚಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News