ಚೀನಾದಲ್ಲಿ ವಾಟ್ಸ್‌ಆ್ಯಪ್‌ಗೆ ನಿಷೇಧ, ಇಂಟರ್‌ನೆಟ್ ಬಿಗಿ
Update: 2017-07-19 20:34 IST
ಹಾಂಕಾಂಗ್, ಜು. 19: ಚೀನಾದಲ್ಲಿ ಇಂಟರ್‌ನೆಟ್ ಮೇಲಿನ ನಿಯಂತ್ರಣವನ್ನು ಅಧಿಕಾರಿಗಳು ಬಿಗಿಗೊಳಿಸಿದ್ದು, ಜನಪ್ರಿಯ ಸಂದೇಶ ವಾಹಕ ‘ವಾಟ್ಸ್‌ಆ್ಯಪ್’ ಮೇಲೆ ಆಂಶಿಕ ತಡೆ ವಿಧಿಸಿದ್ದಾರೆ.
ಬೀಜಿಂಗ್‌ನಿಂದ ‘ಗಾರ್ಡಿಯನ್’ ಕಳುಹಿಸಿದ ಚಿತ್ರ, ವೀಡಿಯೊ ಮತ್ತು ಧ್ವನಿ ಸಂದೇಶಗಳೆಲ್ಲವೂ ಬುಧವಾರ ತಡೆಹಿಡಿಯಲ್ಪಟ್ಟಿವೆ. ಆದರೆ, ಅಕ್ಷರ ಸಂದೇಶಗಳ ವಿನಿಮಯಕ್ಕೆ ತಡೆಯೊಡ್ಡಲಾಗಿಲ್ಲ.
ಅದೇ ವೇಳೆ, ವಾಟ್ಸ್‌ಆ್ಯಪ್ ಮೂಲಕ ಯಾವುದೇ ಸಂದೇಶ ಹೋಗುತ್ತಿಲ್ಲ ಎಂಬುದಾಗಿ ಹಲವಾರು ಬಳಕೆದಾರರು ಹೇಳಿದ್ದಾರೆ.
ದಶಕದಲ್ಲಿ ಎರಡು ಬಾರಿ ನಡೆಯುವ ನಾಯಕತ್ವ ಬದಲಾವಣೆಯು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಈ ನಿಷೇಧವನ್ನು ಅಧಿಕಾರಿಗಳು ಜಾರಿಗೊಳಿಸಿದ್ದಾರೆ.