ಮಾದಕ ದ್ರವ್ಯ ದಂಧೆ: ಸಿಟ್ ಮುಂದೆ ಹಾಜರಾದ ನಿರ್ದೇಶಕ ಪುರಿ ಜಗನ್ನಾಥ್

Update: 2017-07-19 17:17 GMT

ಹೈದರಾಬಾದ್, ಜು. 19: ಮಾದಕ ದ್ರವ್ಯ ದಂಧೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಮುಂದೆ ಜನಪ್ರಿಯ ತೆಲುಗು ಚಿತ್ರ ನಿರ್ದೇಶಕ ಪುರಿ ಜಗನ್ನಾಥ್ ಬುಧವಾರ ಹಾಜರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಗಿ ಭದ್ರತೆ ನಡುವೆ ಬೆಳಗ್ಗೆ 10 ಗಂಟೆಗೆ ಪುರಿ ಜಗನ್ನಾಥ್ ತನ್ನ ಸಹೋದರ ಹಾಗೂ ಪುತ್ರನೊಂದಿಗೆ ನಿಷೇಧ ಹಾಗೂ ತೆರಿಗೆ ಇಲಾಖೆ ಕಚೇರಿಗೆ ತಲುಪಿದರು. ನಗರದಲ್ಲಿ ತಿಂಗಳ ಹಿಂದೆ ಬೆಳಕಿಗೆ ಬಂದ ಮಾದಕ ದ್ರವ್ಯ ಜಾಲಕ್ಕೆ ಸಂಬಂಧಿಸಿ ಪುರಿ ಜಗನ್ನಾಥ್‌ನನ್ನು ಸಿಟ್ ಅಧಿಕಾರಿಗಳು ವಿಚಾರಣೆ ನಡೆಸಿದರು.

ಕೆಲವು ಪ್ರಮುಖ ನಟ-ನಟಿಯರು ಸೇರಿದಂತೆ ಕನಿಷ್ಠ 12 ಮಂದಿ ಕಲಾವಿದರಿಗೆ ಸಿಟ್ ನೊಟೀಸ್ ಜಾರಿ ಮಾಡಿ ಹಾಜರಾಗುವಂತೆ ಸೂಚಿಸಿತ್ತು. ನಟಿಯರಾದ ಚಾರ್ಮಿ ಕೌರ್ ಹಾಗೂ ಮುಮೈತ್ ಖಾನ್‌ರನ್ನು ಅನುಕ್ರಮವಾಗಿ ಜುಲೈ 20 ಹಾಗೂ 21ರಂದು ಸಿಟ್ ವಿಚಾರಣೆ ನಡೆಸಲಿದೆ. ಮುಮೈತ್ ಖಾನ್‌ಗೆ ನೊಟೀಸು ಜಾರಿಗೊಳಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ತೆಲುಗು ರಿಯಾಲಿಟಿ ಶೋ ಶೂಟಿಂಗ್‌ನಲ್ಲಿ ಪಾಲ್ಗೊಂಡಿರುವ ಆಕೆಯನ್ನು ಭೇಟಿಯಾಗಲು ಸಿಟ್ ತಂಡ ಮುಂಬೈಗೆ ತೆರಳಿದೆ.

 ಮಾದಕ ದ್ರವ್ಯ ದಂಧೆ ಪ್ರಕರಣದಲ್ಲಿ ಬಂಧಿಸಲಾದ ಆರೋಪಿಗಳಿಗೆ ಸಂಬಂಧಿಸಿ ನಟರಾದ ರವಿತೇಜ, ನವದೀಪ್, ತರುಣ್, ಸುಬ್ಬರಾಜು, ನಂದು, ಚಿತ್ರಛಾಯಾ ಗ್ರಾಹಕ ಶ್ಯಾಮ್ ಕೆ. ನಾಯ್ಡು, ಕಲಾ ನಿರ್ದೇಶಕ ಚಿನ್ನಾ ಮೊದಲಾದವರನ್ನು ಸಿಟ್ ವಿಚಾರಣೆ ನಡೆಸಿದೆ.

ಈ ಜಾಲದ ಪ್ರಮಖನೆಂದು ಹೇಳಲಾದ ಕೆಲ್ವಿನ್ ಮಸ್ಕರ್ಹೇನಸ್ ಕರೆ ವಿವರಗಳಲ್ಲಿದ್ದ ಸಂಪರ್ಕಕ್ಕೆ ಸಂಖ್ಯೆಗಳಿಗೆ ನೊಟೀಸು ಜಾರಿ ಮಾಡಲಾಗಿದೆ ಎಂದು ತನಿಖೆ ನೇತೃತ್ವ ವಹಿಸಿರುವ ಸುಂಕ ಜಾರಿ ನಿರ್ದೇಶಕ ಅಕುನ್ ಸಬರ್ವಾಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News