ಕೇಂದ್ರ ಸರಕಾರ ಯಾವುದೇ ಭಾಷೆ ಹೇರದು: ಪ್ರಕಾಶ್ ಜಾವ್ಡೇಕರ್
Update: 2017-07-19 23:06 IST
ಹೊಸದಿಲ್ಲಿ, ಜು. 19: ಭಾರತದ ಎಲ್ಲ ಭಾಷೆಗಳ ಬಗ್ಗೆ ಗೌರವ ಹೊಂದಿರುವುದರಿಂದ ಯಾರೊಬ್ಬರ ಮೇಲೂ ಯಾವುದೇ ಭಾಷೆಯನ್ನು ಹೇರುವುದಿಲ್ಲ ಎಂದು ಕೇಂದ್ರ ಸರಕಾರ ಬುಧವಾರ ಸಂಸತ್ತಿನಲ್ಲಿ ಭರವಸೆ ನೀಡಿದೆ.
ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಸಿಪಿಐ ಸದಸ್ಯ ಡಿ. ರಾಜ ಅವರು ಎತ್ತಿದ ಈ ವಿಚಾರದ ಬಗ್ಗೆ ಪ್ರತಿಕ್ರಿಯ ವ್ಯಕ್ತಪಡಿಸಿದ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್, ಭಾರತದ ಎಲ್ಲ ಭಾಷೆಗಳನ್ನು ಬೆಳೆಸುವುದು ಸರಕಾರದ ನೀತಿ ಎಂದರು.
ನಾವು ಭಾರತದ ಎಲ್ಲ ಭಾಷೆಗಳಿಗೆ ಗೌರವ ನೀಡುತ್ತೇವೆ. ಭಾರತದ ಭಾಷೆಗಳ ಬೆಳವಣಿಗೆಗೆ ನಾವು ಶ್ರಮ ವಹಿಸುತ್ತಿದ್ದೇವೆ. ನಾವು ಯಾವುದೇ ಭಾಷೆಯನ್ನು ಯಾರೊಬ್ಬರೂ ಮೇಲೂ ಹೇರಲು ಪ್ರಯತ್ನಿಸುತ್ತಿಲ್ಲ ಎಂದು ಅವರು ಹೇಳಿದರು.
ಶಾಸ್ತ್ರೀಯ ತಮಿಳಿಗಿರುವ ಕೇಂದ್ರ ಸಂಸ್ಥೆಯ ಕಾರ್ಯಕ್ರಮಗಳನ್ನು ಚೆನ್ನೈಯಿಂದ ತಿರುವಾವೂರ್ ಕೇಂದ್ರ ವಿಶ್ವವಿದಯಾನಿಲಯಕ್ಕೆ ವರ್ಗಾಯಿಸುವ ಕುರಿತು ವರದಿಯಾಗಿದೆ ಎಂದು ರಾಜ ಅವರು ಹೇಳಿದಾಗ ಜಾವ್ಡೇಕರ್ ಈ ಉತ್ತರ ನೀಡಿದ್ದಾರೆ.