×
Ad

ಕೊಲೆ ಬೆದರಿಕೆ ಆರೋಪ: ಅಮೆರಿಕದ ಬಾಕ್ಸರ್ ಟೇಲರ್ ಬಂಧನ

Update: 2017-07-19 23:38 IST

ಲಾಸ್ ಏಂಜಲಿಸ್, ಜೂ.19: ಮಹಿಳೆಯೊಬ್ಬರಿಗೆ ಕಚ್ಚಿದ ಹಾಗೂ ಕೊಲೆ ಮಾಡುವ ಬೆದರಿಕೆ ಒಡ್ಡಿದ ಆರೋಪದಲ್ಲಿ ಮಾಜಿ ಮಿಡ್ಲ್‌ವೇಟ್ ಚಾಂಪಿಯನ್ ಜೆರ್ಮೈನ್ ಟೇಲರ್‌ರನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ.

38ರ ಪ್ರಾಯದ ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್‌ರನ್ನು ಆತನ ಮನೆಯಲ್ಲಿ ಬಂಧಿಸಲಾಗಿದೆ ಎಂದು ಅಮೆರಿಕದ ಪೊಲೀಸ್ ಇಲಾಖೆ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಹಲವು ಬಾರಿ ಮಹಿಳೆಗೆ ಕಚ್ಚಿದ ಆರೋಪದಲ್ಲಿ ಟೇಲರ್‌ರನ್ನು ಬಂಧಿಸಲಾಗಿದೆ. ಮನೆಯಿಂದ ಹಿಂಬಾಲಿಸಿದ ಬಂದು ಕೊಲ್ಲುವ ಬೆದರಿಕೆ ಒಡ್ಡಿದ ಟೇಲರ್‌ಗೆ ಮಹಿಳೆ ಪೆಪ್ಪರ್ ಸ್ಪ್ರೇ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

  ಟೇಲರ್ ಎರಡನೆ ಬಾರಿ ಗಂಭೀರ ಆರೋಪಕ್ಕೆ ಗುರಿಯಾಗಿದ್ದಾರೆ. 2014ರಲ್ಲಿ ತನ್ನ ಮನೆಯಲ್ಲೇ ಗುಂಡುಹಾರಾಟ ನಡೆಸಿದ್ದ ಟೇಲರ್ ಸೋದರ ಸಂಬಂಧಿಯನ್ನು ಗಾಯಗೊಳಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಕಳೆದ ವರ್ಷ 19 ವರ್ಷಗಳ ಕಾಲ ಅಮಾನತು ಶಿಕ್ಷೆ ನೀಡಲಾಗಿತ್ತು. 2005ರಲ್ಲಿ ವಿಶ್ವ ಚಾಂಪಿಯನ್ ಪ್ರಶಸ್ತಿ ಜಯಿಸಿದ್ದ ಟೇಲರ್ 2014ರಲ್ಲಿ ಕೊನೆಯ ಬಾರಿ ಸ್ಪರ್ಧಿಸಿದ್ದರು. ಪ್ರಸ್ತುತ ಕಾನೂನು ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಟೇಲರ್‌ರಿಂದ ಬಾಕ್ಸಿಂಗ್ ಬೆಲ್ಟ್‌ನ್ನು ಹಿಂಪಡೆದುಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News