ಡಾ.ಝೆನಿಕಾ ಡಿ’ಸೋಜಾರಿಗೆ ಪಿ.ಹೆಚ್.ಡಿ.ಪದವಿ

Update: 2017-07-21 10:51 GMT

ಮೂಡುಬಿದಿರೆ, ಜು.21: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕಿ ಹಾಗೂ ಕಾಯಚಿಕಿತ್ಸಾ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಡಾ.ಝೆನಿಕಾ ಡಿ’ಸೋಜಾ ಅವರು ಮೊಣಕಾಲು ಸವಕಲಳಿಯಲ್ಲಿ ನಾಲ್ಕು ವಿಧದ ಚಿಕಿತ್ಸೆಯ ತುಲನಾತ್ಮಕ ಅಧ್ಯಯನದಲ್ಲಿ ಸಂಶೋಧನೆ ನಡೆಸಿದ್ದು, ಎಪ್ರಿಲ್ 2017ರಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕರ್ನಾಟಕವು ಇವರ ಮಹಾಪ್ರಬಂಧಕ್ಕೆ ಪಿ.ಹೆಚ್.ಡಿ.ಪದವಿ ನೀಡಿ ಗೌರವಿಸಿದೆ.
ಉಡುಪಿಯ ಎಸ್.ಡಿ.ಎಂ. ಆಯುರ್ವೇದ ಕಾಲೇಜಿನ ಕಾಯಚಿಕಿತ್ಸಾ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಪ್ರೊ.ಡಾ.ಜಿ.ಎಸ್.ಆಚಾರ್ಯ ಮಾರ್ಗದರ್ಶನ ನೀಡಿದ್ದರು.

ಉಡುಪಿಯ ಎಸ್.ಡಿ.ಎಂ. ಆಯುರ್ವೇದ ಕಾಲೇಜಿನಲ್ಲಿ ಸ್ನಾತಕ ಮತ್ತು ಮೈಸೂರಿನ ಸರಕಾರಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ನಡೆಸಿದ ಇವರು, ದಿ.ಲಿಯೋ ಲೋಬೋ ಕಟಪಾಡಿ ಮತ್ತು ಎಲಿಜಾ ಲೋಬೋ ಅವರ ಪುತ್ರಿ. ರೋಕ್ ಬೋನಿಫಸ್ ಡಿ’ಸೋಜಾರ ಧರ್ಮಪತ್ನಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News