×
Ad

ಸುಶ್ಮಾ ಸ್ವರಾಜ್ ರಿಂದ ಸಂಸತ್ತಿಗೆ ತಪ್ಪು ಮಾಹಿತಿ: ಚೀನಾ ಪತ್ರಿಕೆ ಆರೋಪ

Update: 2017-07-21 22:17 IST

ಬೀಜಿಂಗ್, ಜು. 21: ಭಾರತ ಮತ್ತು ಚೀನಾಗಳ ನಡುವೆ ಸಿಕ್ಕಿಂ ಗಡಿಯಲ್ಲಿ ಏರ್ಪಟ್ಟಿರುವ ಬಿಕ್ಕಟ್ಟಿಗೆ ಸಂಬಂಧಿಸಿ ಎಲ್ಲ ದೇಶಗಳು ಭಾರತವನ್ನು ಬೆಂಬಲಿಸುತ್ತಿವೆ ಎಂಬುದಾಗಿ ವಿದೇಶ ಸಚಿವೆ ಸುಶ್ಮಾ ಸ್ವರಾಜ್ ಸಂಸತ್ತಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಚೀನಾ ಸರಕಾರದ ಪರ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ ಶುಕ್ರವಾರ ಹೇಳಿದೆ.

 ಅದೇ ವೇಳೆ, ಯುದ್ಧಕ್ಕೆ ತಯಾರಾಗಿ ಹಾಗೂ ನಿಮ್ಮ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳದಿದ್ದರೆ ನಿಮ್ಮದೇ ಭೂಭಾಗವನ್ನು ಕಳೆದುಕೊಳ್ಳಲು ಸಿದ್ಧರಾಗಿ ಎಂಬ ಎಚ್ಚರಿಕೆಯನ್ನೂ ನೀಡಿದೆ.

ಭಾರತ ಚೀನಾದ ತಾಳ್ಮೆಯನ್ನು ಪರೀಕ್ಷಿಸುತ್ತಿದೆ ಎಂದು ಹೇಳಿರುವ ಪತ್ರಿಕೆ, ಡೋಕಾ ಲ ವಲಯದಿಂದ ಭಾರತ ತನ್ನ ಸೈನಿಕರನ್ನು ಹಿಂದಕ್ಕೆ ಪಡೆದುಕೊಳ್ಳದಿದ್ದರೆ ಚೀನಾದ ಮುಂದಿನ ಹೆಜ್ಜೆ ಯುದ್ಧವಾಗಿರುತ್ತದೆ ಎಂದು ಪತ್ರಿಕೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News