ಮಿಸಾ ಭಾರ್ತಿ ಪ್ರಕರಣ: ರಾಜೇಶ್ ಅಗರ್‌ವಾಲ್ ವಿರುದ್ಧ ಆರೋಪ ಪಟ್ಟಿ ದಾಖಲು
Update: 2017-07-21 23:26 IST
ಹೊಸದಿಲ್ಲಿ, ಜು. 21: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಪುತ್ರಿ ಮಿಸಾ ಭಾರ್ತಿ ಯೊಂದಿಗೆ ಸಂಪರ್ಕ ಹೊಂದಿರುವ ಚಾರ್ಟರ್ಡ್ ಅಕೌಂಟೆಂಟ್ ವಿರುದ್ಧ ಕಪ್ಪು ಹಣ ಬಿಳುಪುಗೊಳಿಸಿದ ಪ್ರಕರಣದ ಆರೋಪ ಪಟ್ಟಿಯನ್ನು ಜಾರಿ ನಿರ್ದೇಶನಾಲಯ ಇಂದು ಸಲ್ಲಿಸಿದೆ.
ಕಪ್ಪುಹಣ ಬಿಳುಪು ತಡೆ ಕಾಯ್ದೆ ಅನ್ವಯ ಚಾರ್ಟರ್ಡ್ ಅಕೌಂಟೆಂಟ್ ರಾಜೇಶ್ ಅಗರ್‌ವಾಲ್ ವಿರುದ್ಧ ಆರೋಪ ಪಟ್ಟಿಯನ್ನು ವಿಶೇಷ ನ್ಯಾಯಾಧೀಶ ನರೇಶ್ ಕುಮಾರ್ ಮಲ್ಹೋತ್ರರಿಗೆ ಸಲ್ಲಿಸಲಾಗಿದೆ.
ಅಕ್ರಮ ಆಸ್ತಿ ಹೊಂದಿದ ಪ್ರಕರಣವನ್ನು ಮಿಸಾ ಭಾರ್ತಿ ಎದುರಿಸುತ್ತಿದ್ದಾರೆ. ತೆರಿಗೆ ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸಲಾದ ಮಿಸಾ ಭಾರ್ತಿಗೆ ಸಂಬಂಧಿಸಿದ ಸಂಸ್ಥೆ ನಡೆಸಿದ ಕೆಲವು ವ್ಯವಹಾರಗಳಲ್ಲಿ ರಾಜೇಶ್ ಅಗರ್‌ವಾಲ್ ಭಾಗಿಯಾಗಿದ್ದರು ಎಂದು ಜಾರಿ ನಿರ್ದೇಶನಾಲಯ ಹೇಳಿದೆ.