×
Ad

ಶೀಘ್ರದಲ್ಲಿ ವಿಮಾನ ಪ್ರಯಾಣಿಕರಿಗೆ ಇಂಟರ್‌ನೆಟ್, ಸೆಟಲೈಟ್ ಫೋನ್ ಸೌಲಭ್ಯ

Update: 2017-07-21 23:34 IST

ನಾಗಪುರ, ಜು. 21: ಒಂದು ವರ್ಷದ ಒಳಗಡೆ ಭಾರತದ ವಿಮಾನ ಪ್ರಯಾಣಿಕರು ಅಂತರ್‌ಜಾಲದಲ್ಲಿ ಹುಡುಕಾಟ ನಡೆಸಬಹುದು, ಫೇಸ್‌ಬುಕ್, ವ್ಯಾಟ್ಸ್ ಆ್ಯಪ್ ಹಾಗೂ ಇನ್‌ಸ್ಟಾಗ್ರಾಮ್‌ನಂತಹ ಜಾಲತಾಣಗಳಿಗೆ ಲಾಗ್ ಆನ್ ಆಗಬಹುದು. ಇದುವರೆಗೆ ಈ ಸೌಲಭ್ಯ ಸೇನಾ ಸಿಬ್ಬಂದಿಗಳಿಗೆ ಮಾತ್ರ ಇತ್ತು. ಇನ್ನು ಮುಂದೆ ಇತರ ಪ್ರಯಾಣಿಕರು ಕೂಡ ಈ ಸೌಲಭ್ಯ ಪಡೆಯಲು ಕೇಂದ್ರ ಸ್ವಾಮಿತ್ವದ ಭಾರತ್ ಸಂಚಾರ್ ನಿಗಮ್ ಹಾಗೂ ಅಂತಾರಾಷ್ಟ್ರೀಯ ಮೊಬೈಲ್ ಸೆಟಲೈಟ್ ಆರ್ಗನೈಸೇಷನ್ ಅವಕಾಶ ಮಾಡಿಕೊಟ್ಟಿದೆ.

ಒಂದು ವರ್ಷದ ಒಳಗಡೆ ಖಾಸಗಿ ಕಂಪೆನಿ ಹಾಗೂ ವ್ಯಕ್ತಿಗಳಿಗೆ ಸೆಟಲೈಟ್ ಫೋನ್ ಸೇವೆ ನೀಡಲಿದ್ದೇವೆ. ಇದಲ್ಲದೆ ವಿಮಾನ ಹಾಗೂ ಹಡಗಿನಲ್ಲಿ ಪ್ರಯಾಣಿಸುವ ಎಲ್ಲ ಪ್ರಯಾಣಿಕರಿಗೆ ಅಂತರ್‌ಜಾಲ ಸೌಲಭ್ಯ ಒದಗಿಸಲಿದ್ದೇವೆ ಎಂದು ಬಿಎಸ್‌ಎನ್‌ಎಲ್ ಅಧ್ಯಕ್ಷ ಅನುಪಮ್ ಶ್ರೀವಾತ್ಸವ ತಿಳಿಸಿದ್ದಾರೆ.

ವೈಫೈ ಮೂಲಕ ವಿಮಾನ ಪ್ರಯಾಣಿಕರು ಡಾಟಾ ಪಡೆಯಲಿದ್ದಾರೆ. ಸಮೀಪದ ಸೆಟಲೈಟ್ ಮೂಲಕ ಈ ಸೌಲಭ್ಯ ಒದಗಿಸಲಾಗುವುದು. ಅತ್ಯಗತ್ಯದ ನಿಯಂತ್ರಣದ ಬಗ್ಗೆ ಅನುಮತಿ ದೊರಕಿದ ಬಳಿಕ ನಿಗದಿಪಡಿಸಲಾಗುವ ಶುಲ್ಕ ಅನುಸರಿಸಿ ಬ್ಯಾಂಡ್‌ವ್ಯಾಪ್ತಿ ನೀಡಲಾಗುವುದು. ಈ ದಿಶೆಯಲ್ಲಿ ಮುಂದುವರಿಯುವಂತೆ ಗೃಹ ಸಚಿವಾಲಯ ಹಾಗೂ ಟೆಲಿಕಮ್ಯುನಿಕೇಷನ್ ವಿಭಾಗ ಬಿಎಸ್‌ಎನ್‌ಎಲ್‌ಗೆ ಸೂಚಿಸಿದೆ ಎಂದು ಶ್ರೀವಾತ್ಸವ ತಿಳಿಸಿದ್ದಾರೆ.

 ಕೇಂದ್ರ ಸರಕಾರ ಸ್ವಾಮಿತ್ವದ ವಿದೇಶ್ ಸಂಚಾರ್ ನಿಗಮ್ ಅನ್ನು 2008 ಫೆಬ್ರವರಿಯಲ್ಲಿ ಸ್ವಾಧೀನಪಡಿಸಿಕೊಂಡ ಬಳಿಕ ಟಾಟಾ ಕಮ್ಯೂನಿಕೇಷನ್ ಇತ್ತೀಚೆಗೆ ಸೆಟಲೈಟ್ ಫೋನ್ ಸೇವೆ ಆರಂಭಿಸಿತ್ತು. ಟಾಟಾ ಗುಂಪು ಕಂಪೆನಿ ತನ್ನ ಸೆಟಲೈಟ್ ಸೇವೆಯನ್ನು ಸೀಮಿತಗೊಳಿಸಿತ್ತು. ಈಗ ಇದನ್ನು ಬಿಎಸ್‌ಎನ್‌ಎಲ್‌ಗೆ ವರ್ಗಾಯಿಸ ಲಾಗಿದೆ. ಈಗ ದೇಶದಲ್ಲಿ ಸೆಟಲೈಟ್ ಫೋನ್ ಸೇವೆ ನೀಡುವ ಪರವಾನಿಗೆ ಹೊಂದಿರುವ ಏಕೈಕ ಸಂಸ್ಥೆ ಬಿಎಸ್‌ಎನ್‌ಎಲ್ ಎಂದು ಅವರು ತಿಳಿಸಿದ್ದಾರೆ.

ಸೆಟಲೈಟ್ ಸೇವೆ ನೀಡುವ ಪರವಾನಿಗೆ ಹೊಂದಿರುವ ಏಕೈಕ ಸಂಸ್ಥೆ ಬಿಎಸ್‌ಎನ್‌ಎಲ್. ಇನ್‌ಮರ್‌ಸ್ಯಾಟ್ ಬಿಎಸ್‌ಎನ್‌ಎಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಕಾನೂನು ಜಾರಿ ನಿರ್ದೇಶನಾಲಯದಿಂದ ಪರಿಶೀಲನೆ ನಡೆಸಿದ ಬಳಿಕ ನಮ್ಮ ಸಂಸ್ಥೆಯ ಆವರಣದಲ್ಲಿ ಇದಕ್ಕೆ ಸಂಬಂಧಿಸಿದ ಉಪಕರಣಗಳನ್ನು ಸ್ಥಾಪಿಸಿದ್ದೇವೆ ಎಂದು ಬಿಎಸ್‌ಎನ್‌ಎಲ್‌ನ ಉನ್ನತ ಮಟ್ಟದ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News