×
Ad

ನೋಟು ನಿಷೇಧ, ಜಿಎಸ್‌ಟಿ ತೆರಿಗೆ ಮೂಲ ವಿಸ್ತರಿಸಿದೆ: ಅರುಣ್ ಜೇಟ್ಲಿ

Update: 2017-07-22 22:15 IST

ಹೊಸದಿಲ್ಲಿ, ಜು. 22: ನೋಟು ನಿಷೇಧ ಹಾಗೂ ಜಿಎಸ್‌ಟಿ ನಗದು ವ್ಯವಹಾರವನ್ನು ಕಠಿಣಗೊಳಿಸಿದೆ. ಆದರೆ, ಡಿಜಿಟಲೀಕರಣದ ಅನುಸರಣೆಗೆ ದಾರಿ ಮಾಡಿಕೊಟ್ಟಿದೆ. ಅಲ್ಲದೆ ತೆರಿಗೆ ಮೂಲವನ್ನು ವಿಸ್ತರಿಸಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ವಿದೇಶದಲ್ಲಿರುವ ಕಪ್ಪು ಹಣ, ದೇಶದಲ್ಲಿರುವ ಕಪ್ಪು ಹಣ ಹಾಗೂ ಬೇನಾಮಿ ಕಂಪೆನಿಗಳನ್ನು ನಿಯಂತ್ರಿಸುವ ಕಾನೂನನ್ನು ಕೇಂದ್ರ ಸರಕಾರ ರೂಪಿಸಿದೆ. ಈ ಮೂಲಕ ವಿದೇಶಕ್ಕೆ ಹಣ ರವಾನೆಯಾಗುವುದು ಹಾಗೂ ತೆರಿಗೆ ವಂಚಿಸುವುದಕ್ಕೆ ಸರಕಾರ ಪರಿಹಾರ ಕಂಡುಕೊಂಡಿದೆ ಎಂದು ಅವರು ಹೇಳಿದರು.

  ಈ ಪರಿಸ್ಥಿತಿ ನಿರ್ವಹಿಸಲು ಪ್ರಯತ್ನದದಲ್ಲಿ ನಾವು ಅಸಹಾಯಕರಾಗಿದ್ದೇವೆ. ಆದುದರಿಂದ ನಾವು ಪ್ರತಿ ವರ್ಷ ಹಣಕಾಸು ಮಸೂದೆ ಮೂಲಕ ಕೆಲವು ಬದಲಾವಣೆಗಳನ್ನು ಘೋಷಿಸಲಿದ್ದೇವೆ. ಇದು ಕೊನೆ ಹಂತದ ವರೆಗೆ ಪರಿಣಾಮಕಾರಿ ಯಾಗಲಿದೆ. ಈ ಕೊನೆ ಹಂತದ ವರಗೆ ಬದಲಾವಣೆ ಶಾಶ್ವತವಾಗದಿದ್ದರೆ ಮುಖ್ಯವಾಗದು ಎಂದು ಅವರು ಹೇಳಿದರು.

  ಇದು ಪರಿಣಾಮಕಾರಿಯಾಗಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಟ್ಟಾರೆ ಗಮನಿಸಿದಾಗ, ಸರಕಾರ ತೆಗೆದುಕೊಂಡ ಕ್ರಮಗಳು ದೀರ್ಘಾವಧಿಯಲ್ಲಿ ಪರಿಣಾಮ ಬೀರಲಿದೆ ಹಾಗೂ ಇದರ ಹಿಂದೆ ಗಣನೀಯ ನೈತಿಕವಾದ ತಾರ್ಕಿಕತೆ ಇದೆ ಎಂದು ಅವರು ತಿಳಿಸಿದರು.

 ನಗದು ಅಪವೌಲ್ಯೀಕರಣ ಹಾಗೂ ಅದರೊಂದಿಗಿನ ಜಿಎಸ್‌ಟಿ ಜಾರಿಗೆ ತಂದಿರುವುದರಿಂದ ನಗದು ಬಳಸುವ ಜನರಿಗೆ ತುಂಬಾ ಕಷ್ಟವಾಯಿತು. ಆದರೆ, ಇದು ಅವರು ಡಿಜಿಟೈಸೇಶನ್ ಅನುಸರಿಸಲು ಕಾರಣವಾಗಲಿದೆ. ನೇರ ಹಾಗೂ ಪರೋಕ್ಷ ತೆರಿಗೆ ಮೂಲ ವಿಸ್ತರಣೆಯಾಗಿರುವುದು ಈಗಾಗಲೇ ಕಂಡು ಬಂದಿದೆ. ಇದು ಡಿಜಿಟೈಶೇಷನ್ ಹೆಚ್ಚಾಗಿರುವುದಕ್ಕೆ ಸೂಚನೆ ಎಂದು ಜೇಟ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News