×
Ad

ಅಸಮಾನತೆಯಲ್ಲಿ ಭಾರತಕ್ಕೆ 132ನೆ ಸ್ಥಾನ

Update: 2017-07-22 22:18 IST

ಹೊಸದಿಲ್ಲಿ, ಜು. 22: ಅಸಮಾನತೆ ಕಡಿಮೆ ಮಾಡುವ ಬದ್ಧತೆಯಲ್ಲಿ ರಾಷ್ಟ್ರಗಳ ಸ್ಥಾನದ ಬಗೆಗಿನ ಸೂಚ್ಯಾಂಕದಲ್ಲಿ 152 ದೇಶಗಳ ಪೈಕಿ ಭಾರತ 132ನೇ ಸ್ಥಾನ ಪಡೆದುಕೊಂಡಿದೆ.

ಸೂಚ್ಯಾಂಕದ ಪ್ರಥಮ ವರದಿಯ ಆವೃತ್ತಿ ಇತ್ತೀಚೆಗೆ ಬಿಡುಗಡೆಯಾಗಿತ್ತು. ಇದರಲ್ಲಿ ಸ್ವೀಡನ್ ನೇತೃತ್ವದ ಒಇಸಿಡಿ ದೇಶಗಳು ಮೇಲಿನ ಸ್ಥಾನದಲ್ಲಿ ಹಾಗೂ ನೈಜೀರಿಯಾ ಕೆಳಗಿನ ಸ್ಥಾನದಲ್ಲಿ ಇದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಅಸಮಾನತೆಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಅವರಿಗೆ ಚಾರಿತ್ರಿಕವಾಗಿ ಸಂಪದ್ಬರಿತ ದೇಶ.

 ಭೂತಾನ್ ಭಾರತಕ್ಕಿಂತ ಕೆಳಗಿನ ಸ್ಥಾನವನ್ನು ಅಂದರೆ 143ನೇ ಸ್ಥಾನ ಪಡೆದುಕೊಂಡಿದೆ. ಭಾರತದ ನೆರೆಯ ರಾಷ್ಟ್ರಗಳಾಗಿರುವ ನೇಪಾಳ 81ನೇ ಸ್ಥಾನ ಹಾಗೂ ಚೀನಾ 87ನಾ ಸ್ಥಾನ ಪಡೆದುಕೊಂಡಿದೆ.

ಸುಸ್ಥಿರ ಅಭಿವೃದ್ಧಿ ಗುರಿಯ ಒಂದು ಭಾಗವಾಗಿ ಅಸಮಾನತೆ ಕಡಿಮೆ ಮಾಡಲು ಸರಕಾರಗಳ ಪ್ರಯತ್ನವನ್ನು ಅಂದಾಜಿಸಲು ಅಂತಾರಾಷ್ಟ್ರೀಯ ಸರಕಾರೇತರ ಸಂಸ್ಥೆ ಆಕ್ಸ್‌ಫಾಮ್ ಹಾಗೂ ಡೆವೆಲಪ್‌ಮೆಂಟ್ ಫೈನಾನ್ಸ್ ಇಂಟರ್‌ನ್ಯಾಷಲ್ ಸೂಚ್ಯಾಂಕ ಹಾಗೂ ಅಸಮಾನತೆಯ ವರದಿಯನ್ನು ಒಟ್ಟಾಗಿಸಿದೆ. ಹೆಚ್ಚುತ್ತಿರುವ ಅಸಮಾನತೆ ನಿಯಂತ್ರಿಸಲು ಸರಕಾರ ಕೈಕೊಳ್ಳಬಹುದಾದ ಕ್ರಮಗಳ ಬಗ್ಗೆ ಈ ಸೂಚ್ಯಾಂಕ ಮುಖ್ಯಮವಾಗಿ ಗಮನಹರಿಸಿದೆ.

   ಸಾರ್ವಜನಿಕ ಸೇವೆಯ ಕಾರಣಕ್ಕೆ 13 ಅಭಿವೃದ್ಧಿಶೀಲ ದೇಶಗಳು ತಮ್ಮ ಅಸಮಾನತೆ ಮಟ್ಟವನ್ನು ಶೇ. 69ರಷ್ಟು ಇಳಿಕೆ ಮಾಡಿರುವುದು ಇತ್ತೀಚಿನ ಅಧ್ಯಯನಗಳಲ್ಲಿ ಬೆಳಕಿಗೆ ಬಂದಿತ್ತು. ಸಂಪತ್ತಿನ ಮರು ಹಂಚಿಕೆಗೆ ಪ್ರಗತಿಪರ ತೆರಿಗೆ, ಕಾರ್ಪೊರೇಶನ್ ಹಾಗೂ ಶ್ರೀಮಂತರಿಗೆ ಹೆಚ್ಚು ತೆರಿಗೆ, ಸಾಮಾಜಿಕ ಸೇವೆಗಳಿಗೆ ಹೆಚ್ಚು ನಿಧಿ -ಇದು ಅಸಮಾನತೆ ಕಡಿಮೆ ಮಾಡಲು ಸರಕಾರಗಳು ಬಳಸಿದೆ ಪ್ರಮುಖ ಸಾಧನವಾಗಿತ್ತು.

  ಭಾರತದಲ್ಲಿ ಸರಕಾರ ಆರೋಗ್ಯ, ಶಿಕ್ಷಣ, ಸಾಮಾಜಿಕ ರಕ್ಷಣೆಗೆ ತುಂಬಾ ಕಡಿಮೆ ವೆಚ್ಚ ಮಾಡುತ್ತದೆ. ತೆರಿಗೆ ವಿನ್ಯಾಸಗಳು ಕಾಗದದಲ್ಲಿ ಪ್ರಗತಿಪರವಾಗಿ ಕಾಣುತ್ತವೆ. ಆದರೆ, ವಾಸ್ತವದಲ್ಲಿ ಅನುಷ್ಠಾನಕ್ಕೆ ಬರುತ್ತಿಲ್ಲ. ಭಾರತದಲ್ಲಿ ಕೆಲಸದ ಸ್ಥಳಗಳಲ್ಲಿ ಕಾರ್ಮಿಕರ ಹಕ್ಕುಗಳಿಗೆ ಹಾಗೂ ಮಹಿಳೆಯರಿಗೆ ಗೌರವ ಇಲ್ಲ. ಭಾರತ ತನ್ನ ಅಸಮಾನತೆ ಇಳಿಕೆ ಮಾಡಿದರೆ 170 ದಶಲಕ್ಷ ಜನಕರು ಬಡತನದಿಂದ ಹೊರಗೆ ಬರಲಿದ್ದಾರೆ ಎಂದು ಅಧ್ಯಯನ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News