ಉ.ಪ್ರ: ಚಹಾ ಸೇವಿಸಿದ 20 ಜನರು ಅಸ್ವಸ್ಥ

Update: 2017-07-23 11:51 GMT

ಮಿರ್ಝಾಪುರ,ಜು.23: ಇಲ್ಲಿಯ ಅಹ್ರಾವುರಾ ಪ್ರದೇಶದಲ್ಲಿಯ ಅಂಗಡಿಯೊಂದರಲ್ಲಿ ರವಿವಾರ ಬೆಳಿಗ್ಗೆ ಚಹಾ ಸೇವಿಸಿದ 20 ಜನರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿ ದ್ದಾರೆ. ಕೆಲವು ದಿನಗಳ ಹಿಂದೆಯೂ ಈ ಅಂಗಡಿಯಲ್ಲಿ ಚಹಾ ಕುಡಿದು 22 ಜನರು ಅಸ್ವಸ್ಥಗೊಂಡಿದ್ದರು.

ಚಹಾ ಕುಡಿದ ಬಳಿಕ ಜನರು ಹೊಟ್ಟೆನೋವು ಮತ್ತು ವಾಂತಿಯಾಗುತ್ತಿರುವ ಬಗ್ಗೆ ದೂರಿಕೊಂಡಿದ್ದು, ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಈ ಪೈಕಿ ಐವರನ್ನು ವಾರಣಾಸಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಚಹಾ ಅಂಗಡಿ ಮಾಲಿಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News