ಜಾಹಿರಾತುಗಳಿಗೆ ಸೀಮಿತವಾದ ಕೇಂದ್ರ ಸರಕಾರದ ‘ಅಚ್ಛೇ ದಿನ್’: ಶಿವಸೇನೆ ಟೀಕೆ

Update: 2017-07-23 14:28 GMT

ಮುಂಬೈ, ಜು,23: ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಶಿವಸೇನೆ, “ಅಚ್ಛೇದಿನ್” ಸರಕಾರದ ಜಾಹಿರಾತುಗಳಿಗಷ್ಟೇ ಸೀಮಿತವಾಗಿದೆ ಎಂದು ಟೀಕಿಸಿದೆ.

ಮೋದಿ ನೇತೃತ್ವದ ಸರಕಾರದ ನೋಟು ಅಮಾನ್ಯೀಕರಣ ಹಾಗೂ ಜಿಎಸ್ ಟಿ ತೆರಿಗೆ ನೀತಿಯನ್ನು ಪ್ರಶ್ನಿಸಿರುವ ಶಿವಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆ, ತಪ್ಪು ವಿಷಯಗಳನ್ನು ಯಾರು ಮಾಡಿದರೂ ಅವರ  ವಿರುದ್ಧ ಮಾತನಾಡಲು ಹಿಂಜರಿಯುವುದಿಲ್ಲ ಎಂದಿದ್ದಾರೆ.

“ಕಳೆದ ನಾಲ್ಕು ತಿಂಗಳುಗಳಲ್ಲಿ 15  ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯೋಗ ಕಳೆದುಕೊಂಡವರಿಗೆ ಕೇಂದ್ರ ಸರಕಾರ ಯಾವ ವ್ಯವಸ್ಥೆ ಮಾಡಿದೆ” ಎಂದು ಠಾಕ್ರೆ ಪ್ರಶ್ನಿಸಿರುವುದಾಗಿ ಶಿವಸೇನೆಯ ಮುಖವಾಣಿ “ಸಾಮ್ನಾ” ಪ್ರಕಟಿಸಿದೆ.

“ಅಚ್ಛೇದಿನ್ ಎನ್ನುವುದು ಜಾಹಿರಾತುಗಳಿಗಷ್ಟೇ ಸೀಮಿತವಾಗಿದೆ. ಎಲ್ಲಾ ವಿಷಯಗಳು ಪ್ರಧಾನಿಯವರ ಇಚ್ಛೆಗೆ ಅನುಗುಣವಾಗಿ ನಡೆಯುವುದಾದರೆ ನಮ್ಮ ದೇಶದಲ್ಲೇ ನಿಜವಾದ ಪ್ರಜಾಪ್ರಭುತ್ವ ಇದೆಯೇ?” ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News