×
Ad

ಪ್ರಮುಖ ಬಿಡಿಭಾಗಗಳ ಸ್ವದೇಶಿ ನಿರ್ಮಾಣಕ್ಕೆ ಸೇನೆಯ ನಿರ್ಧಾರ

Update: 2017-07-23 20:01 IST

ಹೊಸದಿಲ್ಲಿ,ಜು.23: ಯುದ್ಧ ಟ್ಯಾಂಕ್‌ಗಳು ಮತ್ತು ಇತರ ಮಿಲಿಟರಿ ವ್ಯವಸ್ಥೆಗಳ ಪ್ರಮುಖ ಬಿಡಿಭಾಗಗಳ ಪೂರೈಕೆಯಲ್ಲಿ ವಿಳಂಬವು ತನ್ನ ಯುದ್ಧ ಸನ್ನದ್ಧತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಅವುಗಳ ಸ್ವದೇಶಿ ನಿರ್ಮಾಣ ಪ್ರಕ್ರಿಯೆಗೆ ಚುರುಕು ನೀಡಲು ಸೇನೆಯು ನಿರ್ಧರಿಸಿದೆ.

ಶೇ.60ರಷ್ಟಿರುವ ಈಗಿನ ಬಿಡಿಭಾಗಗಳ ಆಮದು ಪ್ರಮಾಣವನ್ನು ಮುಂದಿನ ಮೂರು ವರ್ಷಗಳಲ್ಲಿ ಶೇ.30ಕ್ಕೆ ತಗ್ಗಿಸಲು 41 ಶಸ್ತ್ರಾಸ್ತ್ರ ತಯಾರಿಕೆ ಫ್ಯಾಕ್ಟರಿಗಳ ಒಕ್ಕೂಟವಾಗಿರುವ ಆರ್ಡನನ್ಸ್ ಫ್ಯಾಕ್ಟರಿ ಬೋರ್ಡ್(ಒಎಫ್‌ಬಿ) ಮಹತ್ವದ ನಿಧಾರವನ್ನು ಕೈಗೊಂಡಿದೆ.

ಟ್ಯಾಂಕ್‌ಗಳು ಮತ್ತು ಇತರ ಶಸ್ತ್ರಾಸ್ತ್ರ ವ್ಯವಸ್ಥೆಗಳ ಪ್ರಮುಖ ಬಿಡಿಭಾಗಗಳನ್ನು ದೇಶದಲ್ಲಿಯೇ ತಯಾರಿಸಲು ಕಾರ್ಯತಂತ್ರವನ್ನು ರೂಪಿಸಲು ಮುಂಚೂಣಿಯ ನೆಲೆಗಳಿಗೆ ಫಿರಂಗಿಗಳು ಮತ್ತು ಇತರ ಪ್ರಮುಖ ಮಿಲಿಟರಿ ಪೂರೈಕೆಗಳ ಹೊಣೆಯನ್ನು ಹೊತ್ತಿರುವ ಮಾಸ್ಟರ್ ಜನರಲ್ ಆಫ್ ದಿ ಆರ್ಡನನ್ಸ್(ಎಂಜಿಓ)ಕೂಡ ಪ್ರಮುಖ ಭಾರತೀಯ ರಕ್ಷಣಾ ಸಂಸ್ಥೆಗಳೊಂದಿಗೆ ಮಾತುಕತೆಗಳನ್ನು ಆರಂಭಿಸಿದೆ.

ಎಂಜಿಒ ಮತ್ತು ಒಎಫ್‌ಬಿ ವಾರ್ಷಿಕ 10,000 ಕೋ.ರೂ.ಗೂ ಅಧಿಕ ವೌಲ್ಯದ ಬಿಡಿಭಾಗಗಳನ್ನು ಖರೀದಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News