×
Ad

ಜಗತ್ತಿನಲ್ಲಿ ಬಾಲ್ಯವಿವಾಹವಾಗುತ್ತಿರುವ ಪ್ರತಿ 3ನೇ ಮಗು ಭಾರತೀಯ ಪ್ರಜೆ

Update: 2017-07-23 20:10 IST

ಹೊಸದಿಲ್ಲಿ, ಜು. 22: 8.5 ಕೋಟಿ ಬಾಲಕಿಯರು ಸೇರಿದಂತೆ 10 ಕೋಟಿ ಭಾರತೀಯ ಮಕ್ಕಳು 18 ವರ್ಷದ ಮುನ್ನವೇ ವಿವಾಹವಾಗುತ್ತಿದ್ದಾರೆ. ಜಗತ್ತಿನಲ್ಲಿ ಬಾಲ್ಯ ವಿವಾಹಕ್ಕೆ ಒಳಗಾಗುತ್ತಿರುವ ಪ್ರತಿ ಮೂರು ಮಕ್ಕಳಲ್ಲಿ ಒಂದು ಮಗು ಭಾರತದ ಪ್ರಜೆ ಎಂದು ವರದಿ ಹೇಳಿದೆ.

ಭಾರತದಲ್ಲಿ ಬಾಲ್ಯ ವಿವಾಹ ನಿರ್ಮೂಲನೆ ಕುರಿತ ವರದಿಯನ್ನು ಆ್ಯಕ್ಷನ್ ಏಯ್ಡ ಇಂಡಿಯಾ ಶುಕ್ರವಾರ ಬಿಡುಗಡೆ ಮಾಡಿತು. ಈ ವರದಿಯಲ್ಲಿ 2011 ಸಮೀಕ್ಷೆಯ ಆಧಾರದಲ್ಲಿ ಬಾಲ್ಯ ವಿವಾಹದ ಅಂಕಿ-ಅಂಶವನ್ನು ವಿಶ್ಲೇಷಿಸಲಾಗಿದೆ.

ಬಾಲ್ಯ ವಿವಾಹದಲ್ಲಿ ಕೆಲವು ಸುಧಾರಣೆಗಳು ಕಂಡು ಬಂದಿವೆ. ಆದರೆ, ಭಾರತದಲ್ಲಿ ಜಾಗತಿಕ ಬಾಲ್ಯ ವಿವಾಹದ ಶೇ. 33ರಷ್ಟು ನಡೆಯುತ್ತದೆ. ವಿವಾಹವಾದ ಮಹಿಳಾ ಜನಸಂಖ್ಯೆಯಲ್ಲಿ ಭಾರತದ ಶೇ. 30.2 ಮಕ್ಕಳು.

ಶೇ. 75ರಷ್ಟು ಬಾಲ್ಯ ವಿವಾಹಗಳು ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತದೆ. 2007 ಹಾಗೂ 2011ರಲ್ಲಿ ಇದರ ಪ್ರಮಾಣ ಶೇ. 82ಕ್ಕೆ ಏರಿತ್ತು. ಉತ್ತರಪ್ರದೇಶದಲ್ಲಿ ಶೇ. 16.6 ಬಾಲ್ಯ ವಿವಾಹ ನಡೆದಿದ್ದು, ಅತ್ಯಧಿಕವಾಗಿದೆ.

 2011ರ ಸಮೀಕ್ಷೆಯ ಪ್ರಕಾರ ಉತ್ತರಪ್ರದೇಶ, ಆಂದ್ರಪ್ರದೇಶ, ರಾಜಸ್ಥಾನ, ಬಿಹಾರ್, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದಲ್ಲಿ ಒಟ್ಟಾಗಿ ಶೇ. 70ರಷ್ಟು ಬಾಲ್ಯ ವಿವಾಹ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News