ಕೊಣಾಜೆ: ಭಾರೀ ಮಳೆಗೆ ಮನೆ ಕುಸಿತ

Update: 2017-07-24 10:23 GMT

ಕೊಣಾಜೆ, ಜು.24: ಇಂದು ಬೆಳಗ್ಗೆ ಸುರಿದ ಭಾರೀ ಮಳೆಗೆ ಮನೆಯ ಛಾವಣಿ ಕುಸಿದ ಘಟನೆ ಕೊಣಾಜೆ ಗ್ರಾಮದ ಅಣ್ಣೆರೆಪಾಲು ಎಂಬಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಕೊಣಾಜೆ ದೇವಪ್ಪಗೌಡರ ಮನೆ ಮಳೆಗೆ ಕುಸಿದಿದ್ದು, ಅಪಾರ ಹಾನಿ ಸಂಭವಿಸಿದೆ.
ಘಟನೆಯ ವೇಳೆ ಮನೆಯಲ್ಲಿ ಯಾರೂ ಇಲ್ಲದೆ ಇದ್ದುದರಿಂದ ಸಂಭಾವ್ಯ ಅನಾಹುತ ತಪ್ಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News