ಧೋವಲ್ ಜೊತೆ ಮಾತುಕತೆ: ಚೀನಾ ಸುಳಿವು

Update: 2017-07-24 15:05 GMT

ಬೀಜಿಂಗ್, ಜು.24: ಈ ವಾರ ಬೀಜಿಂಗ್‌ನಲ್ಲಿ ನಡೆಯಲಿರುವ ಬ್ರಿಕ್ಸ್ ರಾಷ್ಟ್ರಗಳ ಭದ್ರತಾ ಸಲಹೆಗಾರರ ಸಮಾವೇಶದ ಸಂದರ್ಭದಲ್ಲಿ ಭಾರತದ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಹಾಗೂ ಚೀನಿ ವಿದೇಶಾಂಗ ಕೌನ್ಸಿಲರ್ ಯಾಂಗ್ ಜಿಯೆಚಿ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುವ ಸಾಧ್ಯತೆಯಿರುವುದಾಗಿ ಚೀನಾ ಸೋಮವಾರ ಸುಳಿವು ನೀಡಿದೆ.

   ಚೀನಾದ ವಿದೇಶಾಂಗ ವಕ್ತಾರ ಲು ಕಾಂಗ್ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಧೋವಲ್ ಹಾಗೂ ಯಾಂಗ್ ನಡುವೆ ಮಾತುಕತೆ ನಡೆಯುವುದನ್ನು ದೃಢಪಡಿಸಲು ಸಾಧ್ಯವಿಲ್ಲವಾದರೂ, ಈ ಹಿಂದೆ ಬ್ರಿಕ್ಸ್ ರಾಷ್ಟ್ರಗಳ ಭದ್ರತಾ ಸಲಹೆಗಾರರ ಸಭೆ ನಡೆದ ಸಂದರ್ಭದಲ್ಲಿಯೂ ದ್ವಿಪಕ್ಷೀಯ ಮಾತುಕತೆಗಳು ನಡೆದಿದ್ದವು ಎಂದು ಹೇಳಿದ್ದಾರೆ.

ಯಾಂಗ್ ಹಾಗೂ ಧೋವಲ್ ನಡುವೆ ಮಾತುಕತೆ ನಡೆಯುವ ಸಾಧ್ಯತೆಯಿದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದ್ದಾರೆ.

ಬ್ರಿಕ್ಸ್ ಎನ್‌ಎಸ್‌ಎ ಅಧಿಕಾರಿಗಳ ಸಮಾವೇಶವು ಜುಲೈ 27-28ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News