1,2 ಮತ್ತು 10 ರೂ.ನಾಣ್ಯಗಳನ್ನು ಅಂಗಡಿಗಳಲ್ಲಿ ಸ್ವೀಕರಿಸುತ್ತಿಲ್ಲ
ಹೊಸದಿಲ್ಲಿ,ಜು.24: ದೇಶದ ಹಲವು ಭಾಗಗಳಲ್ಲಿ 1,2 ಮತ್ತು 10 ರೂ.ನಾಣ್ಯಗಳನ್ನು ಅಂಗಡಿಗಳ ಮಾಲಕರು ಸ್ವೀಕರಿಸುತ್ತಿಲ್ಲ, ಬ್ಯಾಂಕುಗಳೂ ತಿರಸ್ಕರಿಸುತ್ತಿವೆ ಎಂದು ಜೆಡಿಯು ಸದಸ್ಯ ಅಲಿ ಅನ್ವರ್ ಅನ್ಸಾರಿ ಅವರು ಸೋಮವಾರ ರಾಜ್ಯಸಭೆಯಲ್ಲಿ ದೂರಿದರು.
ಶೂನ್ಯವೇಳೆಯಲ್ಲಿ ವಿಷಯವನ್ನೆತ್ತಿದ ಅವರು, ಈ ನಾಣ್ಯಗಳು ತಿರಸ್ಕೃತಗೊಳ್ಳುತ್ತಿರು ವುದರಿಂದ ಜನರು, ವಿಶೇಷವಾಗಿ ಬಡಜನತೆ ಬಹಳಷ್ಟು ತೊಂದರೆಗಳನ್ನು ಎದುರಿಸು ತ್ತಿದ್ದಾರೆ. ಕೆಲವು ಬ್ಯಾಂಕುಗಳು ಸ್ವತಃ ಈ ನಾಣ್ಯಗಳನ್ನು ವಿತರಿಸುತ್ತಿದ್ದರೂ ಸ್ವೀಕರಿಸಲು ಮಾತ್ರ ಹಿಂದೇಟು ಹೊಡೆಯುತ್ತಿವೆ ಎಂದು ಹೇಳಿದರು.
ಹಳೆಯ 500 ಮತ್ತು 1,000 ರೂ.ನೋಟುಗಳನ್ನು ಅಮಾನ್ಯಗೊಳಿಸಿದ ಸರಕಾರದ 2016,ನ.8ರ ನಿರ್ಧಾರವನ್ನು ಪರೋಕ್ಷವಾಗಿ ಕುಟುಕಿದ ಅವರು,‘ನೋಟು ರದ್ದತಿಯ ಎರಡನೇ ಹಂತದಲ್ಲಿ ’ ಈ ನಾಣ್ಯಗಳನ್ನು ವಾಪಸ್ ಪಡೆಯಬೇಕೆಂದು ಹೇಳಿದರು.
ದೇಶದಲ್ಲಿಯ ಐಟಿ ಉದ್ಯಮವು 37 ಲಕ್ಷ ಉದ್ಯೋಗಗಳನ್ನು ಕಡಿತಗೊಳಿಸುವ ಹಂತದಲ್ಲಿದೆ ಎಂದು ಹೇಳಿದ ಕೆಟಿಎಸ್ ತುಲಸಿ(ನಾಮಕರಣ) ಅವರು, ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕದ ಅಧ್ಯಕ್ಷರೊಂದಿಗೆ ತನ್ನ ಭೇಟಿಯ ಸಂದರ್ಭದಲ್ಲಿ ಎಚ್1ಬಿ ವೀಸಾದ ವಿಷಯವನ್ನು ಪ್ರಸ್ತಾಪಿಸಿಲ್ಲ ಎಂದರು.
ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸುವ ಸರಕಾರದ ಕ್ರಮವನ್ನು ಪ್ರಸ್ತಾಪಿ ಸಿದ ಸಿ.ಪಿ.ನಾರಾಯಣನ್ (ಸಿಪಿಎಂ) ಅವರು, ದುರಾಡಳಿತ ಹಾಗೂ 2007ರಲ್ಲಿ ಏರ್‌ಇಂಡಿಯಾ ಮತ್ತು ಇಂಡಿಯನ್ ಏರ್‌ಲೈನ್ಸ್‌ಗಳನ್ನು ವಿಲೀನಗೊಳಿಸಿದ ಹಿಂದಿನ ಸರಕಾರದ ನಿರ್ಧಾರವು ಸಂಸ್ಥೆಯ ನಷ್ಟಕ್ಕೆ ಕಾರಣವಾಗಿದೆ ಎಂದರು.
ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸುವ ಸರಕಾರದ ನಿರ್ಧಾರದ ಬಗ್ಗೆ ಸದನದಲ್ಲಿ ಚರ್ಚೆಯಾಗಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಆನಂದ ಶರ್ಮಾ ಆಗ್ರಹಿಸಿದರು.
ಝರ್ನಾ ದಾಸ್ ಬೈದ್ಯ(ಸಿಪಿಎಂ) ಅವರು ದಿಲ್ಲಿಯಲ್ಲಿ ಹೆಚ್ಚುತ್ತಿರುವ ಅತ್ಯಾಚಾರಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ್ತಿಯ ಹಾಗು ಸೋದರಮಾವನಿಂದಲೇ 10ರ ಹರೆಯದ ಬಾಲಕಿಯ ಮೇಲೆ ಅತ್ಯಾಚಾರ ಘಟನೆಗಳನ್ನು ಪ್ರಸ್ತಾಪಿಸಿದ ಅವರು,‘ಬೇಟಿ ಬಚಾವೋ,ಬೇಟಿ ಪಢಾವೊ’ಘೋಷಣೆಯ ಸ್ಥಿತಿ ಏನಾಗುತ್ತಿದೆ ಎಂದು ಪ್ರಶ್ನಿಸಿದರು.