ಸಿಬಿಐ ತನಿಖೆ ನಡೆಸಿಲ್ಲ ಯಾಕೆ?: ಸುಪ್ರೀಂ ಪ್ರಶ್ನೆ

Update: 2017-07-24 16:13 GMT

ಹೊಸದಿಲ್ಲಿ, ಜು. 24: ಭೋಪಾಲದಲ್ಲಿ ಜೈಲಿನಿಂದ ಪರಾರಿಯಾದ ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ)ದ 8 ಮಂದಿ ಕಾರ್ಯಕರ್ತರನ್ನು ಎನ್‌ಕೌಂಟರ್ ನಡೆಸಿದ ಘಟನೆ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಸಲಾದ ಮನವಿ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಮಧ್ಯಪ್ರದೇಶ ಸರಕಾರ ಹಾಗೂ ಸಿಬಿಐಗೆ ಸುಪ್ರೀಂ ಕೋರ್ಟ್ ನೊಟೀಸು ಜಾರಿ ಮಾಡಿದೆ.

 ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ನ್ಯಾಯ ಪೀಠ, ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಆದೇಶ ನೀಡದಿರುವುದರ ಬಗ್ಗೆ ವಿವರಣೆ ನೀಡುವಂತೆ ಕೇಂದ್ರ ಹಾಗೂ ಮಧ್ಯಪ್ರದೇಶ ಸರಕಾರಕ್ಕೆ ನೋಟೀಸಿನಲ್ಲಿ ತಿಳಿಸಿದೆ.

 ಈ ಪ್ರಕರಣವನ್ನು ಸ್ವತಂತ್ರವಾಗಿ ನಡೆಸುವಂತೆ ಕೋರಿ ಮೆಹ್ಮೂದ್ ಮುಹಮ್ಮದ್ ಸಲೀಮ್ ಮುಚ್ಛಾಲೆ ಸಲ್ಲಿಸಿದ ಮನವಿಯನ್ನು ಈ ವರ್ಷ ಫೆಬ್ರವರಿಯಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

  ಪ್ರಕರಣದ ತನಿಖೆಯನ್ನು ಸ್ವತಂತ್ರವಾಗಿ ನಡೆಸಬೇಕು ಎಂದೂ ದೂರುದಾರರು ಹೇಳಿದ್ದಾರೆ. ಱಱಪೊಲೀಸರು ಎನ್‌ಕೌಂಟರ್ ನಡೆಸಿದರೆ ದೂರು ದಾಖಲಿಸಬೇಕು. ಸಾಕ್ಷಿಗಳನ್ನು ಕಾಪಿಡಬೇಕು. ಸ್ವತಂತ್ರ ಹಾಗೂ ನ್ಯಾಯಯುತವಾಗಿ ತನಿಖೆ ನಡೆಸಬೇಕು. ಸಂತ್ರಸ್ತರ ಮಾಹಿತಿ ಪಡೆಯಬೇಕು ಹಾಗೂ ವಿಚಾರಣೆ ನಡೆಸಬೇಕು ೞೞಎಂದು ಮನವಿಯಲ್ಲಿ ಹೇಳಲಾಗಿದೆ.

ಕಳೆದ ವರ್ಷ ಅಕ್ಟೋಬರ್ 13ರಂದು 8 ಮಂದಿ ಶಂಕಿತ ಸಿಮಿ ಕಾರ್ಯಕರ್ತರನ್ನು ಎನ್‌ಕೌಂಟರ್‌ನಲ್ಲಿ ಹತ್ಯೆಗೈದ ಬಳಿಕ ಮಧ್ಯಪ್ರದೇಶ ಸರಕಾರದ ಬಗ್ಗೆ ತೀವ್ರ ಟೀಕೆ ಗುರಿಯಾಗಿತ್ತು. ಈ ಬಗ್ಗೆ ನ್ಯಾಯಾಗ ತನಿಖೆಗೆ ಆಗ್ರಹಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆರಂಭವಾದ ತನಿಖೆ ಈಗಲೂ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News