×
Ad

ವಿವಿಧ ಪ್ರದೇಶಗಳ 24 ಸ್ಮಾರಕಗಳು ಕಣ್ಮರೆ !

Update: 2017-07-24 22:01 IST

ಹೊಸದಿಲ್ಲಿ, ಜು. 24: ಇಪ್ಪತ್ನಾಲ್ಕು ಸ್ಮಾರಕಗಳು ಕಣ್ಮರೆಯಾಗಿವೆ ಹಾಗೂ ಅದನ್ನು ಪತ್ತೆಹಚ್ಚಲಾಗಿಲ್ಲ ಎಂದು ಸೋಮವಾರ ಸರಕಾರ ತಿಳಿಸಿದೆ.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಸಾಂಸ್ಕೃತಿಕ ಸಚಿವ ಮಹೇಶ್ ಶರ್ಮಾ, ಅರುಣಾಚಲಪ್ರದೇಶದಲ್ಲಿದ್ದ ತಾಮ್ರದ ದೇವಾಲಯದ ಅವಶೇಷ, ಅಸ್ಸಾಮ್‌ನ ತೀನ್ಸುಕಿಯಾ ಜಿಲ್ಲೆಯಲ್ಲಿದ್ದ ಸಾಮ್ರಾಟ್ ಶೇರ್ ಶಾ ಗೆ ಸೇರಿದ ಪಿರಂಗಿಗಳು, ದಿಲ್ಲಿಯಲ್ಲಿದ್ದ ಭಾರಾ ಖಂಬಾ ಸ್ಮಶಾನ, ಪಶ್ಚಿಮಬಂಗಾಳದ ನಾಡಿಯಾ ಜಿಲ್ಲೆಯ ಬಾಮನ್‌ಪುಕುರ್‌ನಲ್ಲಿದ್ದ ಕೋಟೆಯ ಅವಶೇಷಗಳು ಕಣ್ಮರೆಯಾಗಿರುವ ಸ್ಮಾರಕಗಳಲ್ಲಿ ಒಳಗೊಂಡಿವೆ ಎಂದರು.

ನಗರೀಕರಣದಿಂದ ಈ ಸ್ಮಾರಕಗಳನನು ಪತ್ತೆಹಚ್ಚಲು ಕಠಿಣವಾಗುತ್ತಿದೆ. ಈ ಸ್ಮಾರಕಗಳ ಸುತ್ತ ಕಟ್ಟಡಗಳು ಆವರಿಸಿಕೊಂಡಿರಬಹುದು. ಕ್ರಮೇಣ ಸ್ಮಾರಗಳನ್ನು ಕಣ್ಮರೆಯಾಗಿ ರಬಹುದು ಎಂದು ಸ್ಮಾರಕ ಸಂರಕ್ಷಕರು ಹೇಳುತ್ತಿದ್ದಾರೆ ಎಂದು ಅವರು ತಿಳಿಸಿದರು.

ಸ್ಮಾರಕಗಳು ಕಣ್ಣರೆಯಾಗಲು ಇನ್ನೊಂದು ಕಾರಣ ನಿರಂತರ ಭೂಸ್ವಾಧೀನ ಎಂದು ಸಚಿವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News