ಮಹಿಳಾ ಬೈಕರ್ ಸಾವಿಗೆ ರಸ್ತೆಯಲ್ಲಿದ್ದ ಹೊಂಡ ಕಾರಣವಲ್ಲ: ಮಹಾರಾಷ್ಟ್ರ ಸಚಿವ
Update: 2017-07-25 14:48 IST
ಮುಂಬೈ, ಜು.25: ಮಹಿಳಾ ಬೈಕರ್ ಸಾವಿಗೆ ರಸ್ತೆಯಲ್ಲಿದ್ದ ಹೊಂಡ ಕಾರಣವಲ್ಲ ಎಂದು ಮಹಾರಾಷ್ಟ್ರ ಸಚಿವ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ.
“ಆಕೆ ಬೈಕ್ ಚಲಾಯಿಸುತ್ತಿದ್ದ ರಸ್ತೆಯಲ್ಲಿ ನೀರು ನಿಂತು ಕೆಸರು ತುಂಬಿ ಜಾರುತ್ತಿತ್ತು. ಬೈಕ್ ಜಾರಿದ್ದರಿಂದ ಅವರು ಬಿದ್ದಿದ್ದರು. ಹಿಂದಿನಿಂದ ಬರುತ್ತಿದ್ದ ಟ್ರಕ್ ಢಿಕ್ಕಿ ಹೊಡೆದು ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಹೊಂಡಗಳಿದ್ದ ಕಾರಣ ಅಪಘಾತ ಸಂಭವಿಸಿಲ್ಲ” ಎಂದು ಅವರು ಹೇಳಿದ್ದಾರೆ.
34 ವರ್ಷದ ಜಾಗೃತಿ ಹೊಗಾಲೆ ಮುಂಬೈ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಸಂದರ್ಭ ಹೊಂಡವೊಂದಕ್ಕೆ ಬಿದ್ದು, ಟ್ರಕ್ ಢಿಕ್ಕಿ ಹೊಡೆದು ಮೃತಪಟ್ಟಿದ್ದರು ಎಂದು ವರದಿಯಾಗಿತ್ತು.