ದಿಲೀಪ್‍ರ ರಿಮಾಂಡ್ ವಿಸ್ತರಣೆ
Update: 2017-07-25 17:25 IST
ಕೊಚ್ಚಿ,ಜು.25: ನಟಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ನಟ ದಿಲೀಪ್‍ರ ರಿಮಾಂಡ್ ಅವಧಿಯನ್ನು ಮುಂದುವರಿಸಲಾಗಿದೆ. ಮುಂದಿನ ತಿಂಗಳ 8ರವರೆಗೆ ರಿಮಾಂಡ್ ಮುಂದುವರಿಸಲಾಗಿದೆ.
ಹೈಕೋರ್ಟಿನಲ್ಲಿ ಸೋಮವಾರ ಜಾಮೀನುಅರ್ಜಿ ತಿರಸ್ಕøತವಾದ್ದರಿಂದ ಹೆಚ್ಚಿನ ಕ್ರಮಗಳಿಲ್ಲದೆ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಲಾಯಿತು.
ನ್ಯಾಯಾಂಗ ಬಂಧನದ ಅವಧಿ ಕೊನೆಗೊಂಡದ್ದರಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ದಿಲೀಪ್‍ರನ್ನು ಮ್ಯಾಜಿಸ್ಟ್ರೇಟ್ ಎದುರಿನಲ್ಲಿ ಹಾಜರು ಪಡಿಸಲಾಗಿದೆ.
ಕೋರ್ಟಿನಲ್ಲಿ ನೇರವಾಗಿ ಹಾಜರುಪಡಿಸಲು ಜೈಲಿನಿಂದ ಹೊರಗೆ ಕರೆದುಕೊಂಡು ಹೋದರೆ ಸೃಷ್ಟಿಯಾಗುವ ಭದ್ರತಾ ಸಮಸ್ಯೆಯನ್ನು ಪೊಲೀಸರು ಕೋರ್ಟಿಗೆ ಮನವರಿಕೆ ಮಾಡಿದ್ದರಿಂದ ಜೈಲಿನಿಂದಲೇ ವೀಡಿಯೊ ಕಾನ್ಫರೆನ್ಸ್ ಮೂಲಕ ದಿಲೀಪ್‍ರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು.