ಕೆನಡದ ಈ ವ್ಯಕ್ತಿಗೆ 25 ಪತ್ನಿಯರು, 146 ಮಕ್ಕಳು!

Update: 2017-07-25 15:02 GMT

ಮಾಂಟ್ರಿಯಲ್, ಜು. 25: ಒಂದಕ್ಕಿಂತ ಹೆಚ್ಚು ಹೆಂಡತಿಯರನ್ನು ಹೊಂದಿದ ಆರೋಪಗಳಿಗಾಗಿ ವಿಚಾರಣೆ ಎದುರಿಸುತ್ತಿರುವ ಇಬ್ಬರು ವ್ಯಕ್ತಿಗಳು ತಪ್ಪಿತಸ್ಥರು ಎಂಬುದಾಗಿ ಕೆನಡದ ನ್ಯಾಯಾಲಯವೊಂದು ಸೋಮವಾರ ತೀರ್ಪು ನೀಡಿದೆ ಹಾಗೂ ಆ ಮೂಲಕ ಈ ಪದ್ಧತಿಗೆ ಸುದೀರ್ಘ ಸಮಯದಿಂದ ಇರುವ ನಿಷೇಧವನ್ನು ಎತ್ತಿಹಿಡಿದಿದೆ.

ತಪ್ಪಿತಸ್ಥರ ಪೈಕಿ ಓರ್ವ 25 ಹೆಂಡತಿಯರು ಮತ್ತು 146 ಮಕ್ಕಳನ್ನು ಹೊಂದಿದ್ದಾನೆ!

25 ಹೆಂಡತಿಯರನ್ನು ಹೊಂದಿರುವ ವಿನ್ಸ್‌ಟನ್ ಬ್ಲಾಕ್‌ಮೋರ್ ಮತ್ತು ಐವರು ಹೆಂಡತಿಯರನ್ನು ಹೊಂದಿರುವ ಜೇಮ್ಸ್ ಮರಿಯನ್ ಓಲರ್ ಐದು ವರ್ಷಗಳ ಜೈಲು ಶಿಕ್ಷೆ ಎದುರಿಸುತ್ತಿದ್ದಾರೆ.

ದೇಶದಲ್ಲಿ 127 ವರ್ಷಗಳ ಹಿಂದೆ ಜಾರಿಗೆ ಬಂದಿರುವ ಬಹುಸಂಗಾತಿ ನಿಷೇಧ ಕಾನೂನಿಗೆ ಎದುರಾದ ನಿಜವಾದ ಪರೀಕ್ಷೆ ಇದಾಗಿತ್ತು.

ಈ ಇಬ್ಬರ ವಿರುದ್ಧ ಮೊಕದ್ದಮೆ ಹೂಡುವುದಕ್ಕಾಗಿ ಎರಡು ದಶಕಗಳ ಅವಧಿಯಲ್ಲಿ ಮೂವರು ವಿಶೇಷ ಪ್ರಾಸಿಕ್ಯೂಟರ್‌ಗಳನ್ನು ನೇಮಿಸಲಾಗಿತ್ತು. ಆದರೆ ಬಹು ಸಂಗಾತಿಯನ್ನು ಹೊಂದುವುದನ್ನು ನಿಷೇಧಿಸುವ ಕಾನೂನು ಧಾರ್ಮಿಕ ಸ್ವಾತಂತ್ರದ ಸಾಂವಿಧಾನಿಕ ಹಕ್ಕನ್ನು ಉಲ್ಲಂಘಿಸಬಹುದು ಎಂಬ ಹೆದರಿಕೆಯಿಂದ ಅವರು ಹಿಂದೆ ಸರಿದಿದ್ದರು.

ಈ ಇಬ್ಬರು ತಪ್ಪಿತಸ್ಥರು ಅನುಸರಿಸುತ್ತಿರುವ ‘ಫಂಡಮೆಂಟಲಿಸ್ಟ್ ಚರ್ಚ್ ಆಫ್ ಜೀಸಸ್ ಕ್ರೈಸ್ಟ್ ಆಫ್ ಲ್ಯಾಟರ್-ಡೇ ಸೇಂಟ್ಸ್ (ಎಫ್‌ಎಲ್‌ಡಿಎಸ್)’ ಧರ್ಮವು ಒಂದಕ್ಕಿಂತ ಹೆಚ್ಚಿನ ಸಂಗಾತಿಗಳನ್ನು ಹೊಂದಲು ಅವಕಾಶ ನೀಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News