×
Ad

ಟಾಲಿವುಡ್ ಮಾದಕದ್ರವ್ಯ ಜಾಲ: ಕಾಜಲ್ ಅಗರ್‌ವಾಲ್ ಮ್ಯಾನೇಜರ್ ಬಂಧನ

Update: 2017-07-25 22:04 IST

ಹೊಸದಿಲ್ಲಿ, ಜು. 25: ಮಾದಕದ್ರವ್ಯ ಹೊಂದಿದ ಆರೋಪದಲ್ಲಿ ಜನಪ್ರಿಯ ನಟಿ ಕಾಜಲ್ ಅಗರ್‌ವಾಲ್ ಮ್ಯಾನೇಜರ್ ಪುಟ್ಕಾರ್ ರೋನ್ಸನ್ ಜೋಸೆಫ್‌ನನ್ನು ವಿಶೇಷ ತನಿಖಾ ತಂಡ ಸೋಮವಾರ ಬಂದಿಸಿದೆ.

ಕಾಜಲ್ ಅಗರ್‌ವಾಲ್ ಚಿತ್ರೋದ್ಯಮಕ್ಕೆ ಪ್ರವೇಶಿಸಿದ ದಿನದಿಂದಲೂ ಜೋಸೆಪ್ ಅವರ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಮಣಿಕೊಂಡದಲ್ಲಿರುವ ಜೋಸೆಫ್‌ನ ನಿವಾಸದ ಮೇಲೆ ವಿಶೇಷ ತನಿಖಾ ತಂಡ ದಾಳಿ ನಡೆಸಿದೆ. ಈ ಸಂದರ್ಭ ಆತನ ನಿವಾಸದಲ್ಲಿ ಗಾಂಜಾ ಪತ್ತೆಯಾಗಿದೆ. ನಾವು ಆತನನ್ನು ಪ್ರಶ್ನಿಸಿದ್ದೇವೆ. ಮುಂದಿನ ತನಿಖೆ ನಡೆಯುತ್ತಿದೆ ಎಂದು ಅಬಕಾರಿ ಹಾಗೂ ನಿಷೇಧ ಜಾರಿ ಇಲಾಖೆಯ ನಿರ್ದೇಶಕ ಅಕುಲ್ ಸಬರ್‌ವಾಲ್ ತಿಳಿಸಿದ್ದಾರೆ. ಈ ಹಿಂದೆ ವಿಚಾರಣೆಗೊಳಪಡಿಸಲಾದ ನಟರು ನೀಡಿದ ಮಾಹಿತಿ ಆಧಾರದಲ್ಲಿ ಜೋಸೆಫ್‌ನನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News