ರಕ್ಷಕ-ಶಿಕ್ಷಕ ಸಮಾವೇಶ: ಸಾಧಕರಿಗೆ ಅಭಿನಂದನೆ

Update: 2017-07-26 05:34 GMT

ವಿಟ್ಲ, ಜು. 26: ಪಾಲಕರು ಮತ್ತು ಶಿಕ್ಷಕರು ಮಕ್ಕಳ ಕುರಿತಾಗಿ ಸದಾ ಗಮನ ಹರಿಸುತ್ತಿದ್ದರೆ ಅಂತಹ ವಿದ್ಯಾರ್ಥಿಗಳ ಬದುಕು ಭವಿಷ್ಯದಲ್ಲಿ ಉಜ್ವಲ ವಾಗುತ್ತದೆ ಎಂದು ದಿನೇಶ ಶೆಟ್ಟಿ ಅಳಿಕೆ ಅಭಿಪ್ರಾಯಪಟ್ಟರು. ಅವರು ತುಂಬೆ ಸೆಂಟ್ರಲ್ ಸ್ಕೂಲ್ ರಕ್ಷಕ-ಶಿಕ್ಷಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಂಬೆ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಕೆ.ಎನ್. ಗಂಗಾಧರ ಆಳ್ವ ಮಾತನಾಡಿ ಜನನಿ ತಾನೇ ಮೊದಲ ಗುರು ಎಂಬ ಮಾತಿನಂತೆ ಮಕ್ಕಳ ಅಭ್ಯುದಯದಲ್ಲಿ ತಾಯಿ ಪಾತ್ರ ದೊಡ್ಡದು. ನಂತರ ಶಿಕ್ಷಕರು, ಈ ನಿಟ್ಟಿನಲ್ಲಿ ಪಾಲಕರು ಮತ್ತು ಶಿಕ್ಷಕರು ಪರಸ್ಪರ ಸಹಕಾರದಿಂದ ಮಕ್ಕಳನ್ನು ಮುನ್ನಡೆಸಬೇಕು ಎಂದರು.

ತುಂಬೆ ಸೆಂಟ್ರಲ್ ಸ್ಕೂಲ್‌ನ ಪ್ರಶಸ್ತಿ ಪರಸ್ಕೃತ ಶಿಕ್ಷಕಿ ಕವಿತಾ ಪ್ರಕಾಶ್ ಅವರು ಅಭಿನಂದನೆಗೆ ಕೃತಜ್ಞತಾ ಮಾತಗಳನ್ನಾಡಿದರು. ನಲುವತ್ತರಷ್ಟು ವಿದ್ಯಾರ್ಥಿಗಳನ್ನು ಪಿಟಿಎ ವತಿಯಿಂದ ನಗದು ದತ್ತಿ ಪುರಸ್ಕಾರಗಳನ್ನು ನೀಡಿ ಪುರಸ್ಕರಿಸಲಾಯಿತು. ಶಾಲಾ ಸಂಸ್ಥಾಪ ಅಹ್ಮದ್ ಹಾಜಿ ಹಾಗೂ ಸಂಚಾಲಕ ಬಸ್ತಿ ವಾಮನ ಶೆಣೈ ಅವರು ವಿದ್ಯಾರ್ಥಿಗಳನ್ನು ಪುರಸ್ಕರಿಸಿದರು. ಇದೇ ವೇಳೆ ತುಂಬೆ ಸೆಂಟ್ರಲ್ ಸ್ಕೂಲ್‌ಗೆ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ದೇವದಾಸ್ ತುಂಬೆ, ಉಪಾಧ್ಯಕ್ಷರಾಗಿ ಗೀತಾ ಶೆಟ್ಟಿ, ಕಾರ್ಯದರ್ಶಿಯಾಗಿ ಶ್ರೀಮತಿ ವಿದ್ಯಾ ಕೆ., ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬೂಬಕ್ಕರ್, ಹಾಶೀರ್, ಗಿರೀಶ್ ಶೆಟ್ಟಿ ಆಯ್ಕೆಯಾದರು. ತುಂಬೆ ಬಿ.ಎ. ಐ.ಟಿ.ಸಿ. ಪ್ರಾಂಶುಪಾಲ ನವೀನ್ ಕುಮಾರ್ ಮಾಹಿತಿ ನೀಡಿದರು.

ಪಿಟಿಎ ನಿರ್ಗಮನ ಅಧ್ಯಕ್ಷೆ ಉಮಾಚಂದ್ರಶೇಖರ್, ತುಂಬೆ ಸೆಂಟ್ರಲ್ ಸ್ಕೂಲ್ ಮುಖ್ಯೋಪಾಧ್ಯಾಯಿನಿ ವಿದ್ಯಾ ಕೆ. ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕ ವಿ. ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ಶಿಕ್ಷಕಿ ರೇಷ್ಮಾ ಶೆಟ್ಟಿ ವಂದಿಸಿದರು. ಅಬ್ದುಲ್ ಕಬೀರ್ ಸಾಧಕರ ಪಟ್ಟಿ ವಾಚಿಸಿದರು. ಬಂಟ್ವಾಳ ತಾಲೂಕು ಮಟ್ಟದಲ್ಲಿ ವಿಜ್ಞಾನ ವಿಭಾಗದಲ್ಲಿ ಅತ್ಯಧಿಕ ಅಂಕ ಪಡೆದ ಶಾಮಿಯತ್ ನುಸೈಬಾಳನ್ನು ಸನ್ಮಾನಿಸಲಾಯಿತು. ಚಿತ್ರಕಲಾ ಶಿಕ್ಷಕ ಪದ್ಮನಾಭ ಉಪಾಧ್ಯಾಯ ಹಾಗೂ ಅಶೋಕ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News