ಮಂಗಳೂರಿನಿಂದ ಹೊರಟ ಹಜ್ ಯಾತ್ರಾರ್ಥಿಗಳ 4ನೆ ತಂಡ

Update: 2017-07-26 08:11 GMT

ಮಂಗಳೂರು, ಜು.26: ಪವಿತ್ರ ಹಜ್ ಯಾತ್ರೆಯ 4ನೆ ತಂಡ ಬುಧವಾರ ಮಧ್ಯಾಹ್ನ 12:50ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಿದೆ.

157 ಯಾತ್ರಾರ್ಥಿಗಳು ಪ್ರಯಾಣ ಬೆಳೆಸಿದ್ದು, ಹಜ್ ಯಾತ್ರೆಗೆ ತೆರಳಿದ 4ನೆ ತಂಡ ಇದಾಗಿದೆ. ತಂಡದೊಂದಿಗೆ ತೆರಳಬೇಕಾಗಿದ್ದ ಓರ್ವ ಮಹಿಳೆ ಅನಾರೋಗ್ಯಕ್ಕೀಡಾದುದರಿಂದ ಅವರು ಯಾತ್ರಾರ್ಥಿಗಳೊಂದಿಗೆ ತೆರಳಿಲ್ಲ.

ಈ ಸಂದರ್ಭ ಮಂಗಳೂರು ಹಜ್ ಕ್ಯಾಂಪ್ ಅಧ್ಯಕ್ಷ ಹಾಜಿ ಯೆನೆಪೊಯ ಮುಹಮ್ಮದ್ ಕುಂಞಿ, ರಾಜ್ಯ ಹಜ್ ಕಮಿಟಿ ಸದಸ್ಯ ಹಾಜಿ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಪದಾಧಿಕಾರಿಗಳಾದ ಎಸ್.ಎಂ. ರಶೀದ್ ಹಾಜಿ, ನಕ್ವಾ ಯಹ್ಯಾ, ಸಿ. ಮಹ್ಮೂದ್ ಹಾಜಿ, ಎಂ.ಎ. ಮುಹಮ್ಮದ್ ಹಾಜಿ, ಹನೀಫ್ ಹಾಜಿ ಬಂದರ್, ಹನೀಫ್ ಬಜ್ಪೆ, ರಫೀಕ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News