ಬ್ರಿಟನ್: 2040ರಿಂದ ಹೊಸ ಡೀಸೆಲ್, ಪೆಟ್ರೋಲ್ ಕಾರುಗಳಿಲ್ಲ

Update: 2017-07-26 15:21 GMT

ಲಂಡನ್, ಜು. 26: ವಾಯು ಮಾಲಿನ್ಯವನ್ನು ನಿಯಂತ್ರಿಸುವುದಕ್ಕಾಗಿ 2040ರಿಂದ ಹೊಸ ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳು, ಮತ್ತು ವ್ಯಾನ್‌ಗಳ ಮಾರಾಟವನ್ನು ನಿಷೇಧಿಸಲಾಗುವುದು ಎಂದು ಬ್ರಿಟನ್ ಬುಧವಾರ ಹೇಳಿದೆ.

ಸರಕಾರದ ಭಾರೀ ನಿರೀಕ್ಷಿತ 300 ಕೋಟಿ ಪೌಂಡ್ ವಾಯು ಮಾಲಿನ್ಯ ಯೋಜನೆಯ ಭಾಗವಾಗಿರುವ ಈ ಉಪಕ್ರಮವನ್ನು ಪರಿಸರ ಸಚಿವ ಮೈಕಲ್ ಗೋವ್ ಘೋಷಿಸಿದರು.

ಸಾರಜನಕದ ಡೈ ಆಕ್ಸೈಡ್ ಮಟ್ಟವನ್ನು ಕಾನೂನುಬದ್ಧ ಮಟ್ಟಕ್ಕೆ ತರಲು ಸರಕಾರವು ಸ್ಥಳೀಯ ಆಡಳಿತಗಳಿಗೆ 25.5 ಕೋಟಿ ಪೌಂಡ್ ನಿಧಿಯನ್ನು ಒದಗಿಸುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News